‘ಶಿಕ್ಷಣ ಮತ್ತು ಜೀವನದ ಅರ್ಥ’ ಜೆ. ಕೃಷ್ಣಮೂರ್ತಿ ಅವರ ಮೂಲ ಕೃತಿಯಾಗಿದ್ದು, ಕು.ಶಿ. ಹರಿದಾಸಭಟ್ಟ ಅವರು ಕನ್ನಡಕ್ಕೆ ಅನುವಾಸಿದ್ದಾರೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಪ್ರಪಂಚದಲ್ಲಿರುವ ವಿವಿಧ ದೇಶಗಳನ್ನು ಸುತ್ತಾಡಿ ಬಂದವರಿಗೆ ಇಂಡಿಯಾ, ಅಮೇರಿಕಾ, ಯುರೋಪ, ಆಸ್ಟ್ರೇಲಿಯಾ ಈ ಎಲ್ಲ ಕಡೆಗೂ ಮನುಷ್ಯರ ಸ್ವಭಾವವು ಒಂದೇ ತೆರನಾಗಿರುವುದು ಕಂಡುಬರುತ್ತದೆ. ಅಚ್ಚಿ- ನಲ್ಲಿ ಎರಕಹೊಯ್ದಂತೆ ಏಕರೂಪಿಗಳಾದ ಮನುಷ್ಯರನ್ನು ನಾವು ಸೃಷ್ಟಿಸುವಂತೆ ತೋರುತ್ತದೆ. ಇವರಿಗೆ ಭದ್ರತೆಯೇ ಪರಮೋದ್ದೇಶವು, ಒಂದು ‘ದೊಡ್ಡ ಜನ 'ವಾಗಿ ಬಾಳಬೇಕೆಂಬುದೇ ಹೆಬ್ಬಯಕೆ, ಮತ್ತು ಒಂದಿಷ್ಟು ಆಲೋಚನೆ ಇಲ್ಲದೆ ಸುಖವಾಗಿ ದಿನ ಹೋದರೆ ಸಾಕೆಂಬುದೇ ಇಪ್ಪತವ- ವಾದ ತತ್ತ್ವವಾಗಿರುತ್ತವೆ.
ಸಂಪ್ರದಾಯ ನಿಬದ್ಧವಾದ ನಮ್ಮ ಶಿಕ್ಷಣ ಕ್ರಮದಲ್ಲಿ ಸ್ವತಂತ್ರ ಆಲೋಚನೆಗೆ ಅವಕಾಶವಿಲ್ಲ. ಅನುಸರಣೆಯೇ ಮುಖ್ಯವಾಗಿ ಜನರಲ್ಲಿ ಸಾಧಾರಣತೆಯು ಬೆಳೆಯುತ್ತಿದೆ. ಗುಂಪಿಗಿಂತ ಭಿನ್ನವಾಗಿ ಮತ್ತು ವಿಶಿಷ್ಟ- ವಾಗಿಯೂ, ಪರಿಸರವನ್ನು ಇದಿರಿಸುತ್ತಲೂ, ಬಾಳುವುದು ಸುಲಭವಲ್ಲ, ಯಶಸ್ಸಿಗೋಸ್ಕರ ಹಾತೊರೆಯುವವರಿಗೆ ನಿರಪಾಯವೂ ಅಲ್ಲ. ಬದುಕು ಯಶಸ್ವಿಯಾಗಿ ಸಾಗಬೇಕೆಂಬ ಹವಣಿಕೆಯನ್ನು ಭೌತ ಪ್ರಪಂಚಕ್ಕೆ ಮಾತ್ರ ವಲ್ಲದೆ ಆಧ್ಯಾತ್ಮಿಕ ರಂಗಕ್ಕೂ ನಾವು ಅನ್ವಯಿಸುತ್ತಿದ್ದೇವೆ. ನಮ್ಮ ಅಂತ ರಂಗದಲ್ಲಿಯೂ, ಬಹಿರಂಗದಲ್ಲಿಯ ಕಷ್ಟ, ಅಪಾಯ, ಮತ್ತು ಪರಿಶ್ರಮ ವಿಲ್ಲದೆ ಜೋಪಾನವಾಗಿರಲು ನಾವು ಇಷ್ಟಪಡುತ್ತೇವೆ ಎಂಬುವುದನ್ನು ಲೇಖಕರು ಇಲ್ಲಿ ವಿವರಿಸಿದ್ದಾರೆ.
©2025 Book Brahma Private Limited.