‘ಎಡ್ಬರ್ಡ್ ಸೈದ್’ ರಾಮಲಿಂಗಪ್ಪ ಟಿ. ಬೇಗೂರು ಅವರ ಅನುವಾದಿತ ಚಿಂತನೆಗಳ ಬರಹವಾಗಿದೆ. ಸಾಹಿತ್ಯ-ಇತಿಹಾಸ-ಸಾಂಸ್ಕೃತಿಕ ಮತ್ತು ರಾಜಕೀಯಗಳೆಂಬ ವರ್ತುಲದ ಸುತ್ತ ತಮ್ಮ ವಿಶ್ಲೇಷಣಾತ್ಮಕ ಬರಹ-ಭಾಷಣಗಳಿಂದ ಜಾಗತಿಕ ಮಟ್ಟದಲ್ಲಿ ಇಂದು ಗುರುತಿಸಲ್ಪಟ್ಟ ಎಡ್ವರ್ಡ್ ಸೈದ್ ಅವರ ಚಿಂತನೆಗಳನ್ನು ಗ್ರಹಿಸಲು ಈ ಪುಸ್ತಕ ತುಂಬ ಸಹಕಾರಿ.
ಹೊಸತು-2004- ನವೆಂಬರ್
ಸಾಹಿತ್ಯ-ಇತಿಹಾಸ-ಸಾಂಸ್ಕೃತಿಕ ಮತ್ತು ರಾಜಕೀಯಗಳೆಂಬ ವರ್ತುಲದ ಸುತ್ತ ತಮ್ಮ ವಿಶ್ಲೇಷಣಾತ್ಮಕ ಬರಹ-ಭಾಷಣ ಗಳಿಂದ ಜಾಗತಿಕ ಮಟ್ಟದಲ್ಲಿ ಇಂದು ಗುರುತಿಸಲ್ಪಟ್ಟ ಎಡ್ವರ್ಡ್ ಸೈದ್ ಅವರ ಚಿಂತನೆಗಳನ್ನು ಗ್ರಹಿಸಲು ಈ ಪುಸ್ತಕ ತುಂಬ ಸಹಕಾರಿ. ಶ್ರೀಮಂತ ರಾಷ್ಟ್ರಗಳು ಸುಧಾರಣೆಯ ನೆಪದಲ್ಲಿ ಬಡರಾಷ್ಟ್ರಗಳಲ್ಲಿ ತಮ್ಮ ವಸಾಹತು ಸ್ಥಾಪಿಸಿ ಯಜಮಾನ ಸಂಸ್ಕೃತಿ ಬೆಳೆಸುವುದನ್ನು ವಿರೋಧಿಸುವ ಸೈದ್ ಹಿಂದೆ ಪ್ಯಾಲೆಸ್ತೀನ್ ನಿರಾಶ್ರಿತರಾಗಿದ್ದರು. ಅಮೆರಿಕಾದ ವಿಶ್ವವಿದ್ಯಾನಿಲಯದಲ್ಲಿ ತೌಲನಿಕ ಸಾಹಿತ್ಯ ವಿಭಾಗದ ಪ್ರಾಧ್ಯಾಪಕರಾಗಿದ್ದರು. ಪ್ರಮುಖ ರಾಜಕೀಯ ಚಿಂತಕರಲ್ಲೊಬ್ಬರಾಗಿದ್ದರು. ವಿಶೇಷವಾಗಿ ಈ ಪುಸ್ತಕದಲ್ಲಿ ಸೈದ್ ಅವರನ್ನೂ ಅವರ ಇತಿಹಾಸದ ಬರೆವಣಿಗೆಯನ್ನೂ ಹೊಸ ಜಾಗತಿಕ ದೃಷ್ಟಿಕೋನವೊಂದನ್ನೂ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ.
©2024 Book Brahma Private Limited.