ಸಂಗೀತವೆಂಬ ಅಮೂರ್ತ ಮಾಧ್ಯಮವನ್ನು ಕುರಿತು ಬರವಣಿಗೆಗಳು ಕಡಿಮೆ. ಪ್ರಸ್ತುತ ಪುಸ್ತಕವು ಸಂಗೀತಮಾಧ್ಯಮ ಕುರಿತಂತೆ ತುಂಬ ಲವಲವಿಕೆಯಿಂದ ಸಂವಾದಿಸುತ್ತದೆ; ಕಥೆ-ಉಪಕಥೆ-ಐತಿಹ್ಯಗಳನ್ನು ಸ್ವಾರಸ್ಯವಾಗಿ ಉಲ್ಲೇಖಿಸುತ್ತಲೇ ತೀರಾ ಕ್ಲಿಷ್ಟ ಪರಿಕಲ್ಪನೆಗಳನ್ನೂ ವಿವರಿಸುತ್ತದೆ. ಆದ್ದರಿಂದಲೇ ಸಂಗೀತ ತಜ್ಞರೊಂದಿಗೆ ವಿದ್ಯಾರ್ಥಿಗಳೂ ಸಂಸ್ಕ ತಿ ಆಸಕ್ತರೂ ಮತ್ತು ಸಾದಾ ಓದುಗರೂ ಈ ಪುಸ್ತಕದಿಂದ ಲಾಭ ಪಡೆಯಬಹುದು. ಜೊತೆಗೆ, ಶಾಸ್ತ್ರೀಯತೆಯನ್ನು ಮೀರಿದ ಕಥನವೊಂದರ ಆಕರ್ಷಕ ಗುಣವೂ ಈ ಪುಸ್ತಕಕ್ಕಿದೆ.
ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ. ಮರಗಿಡಬಳ್ಳಿ ಅಂತರಂಗದ ಪುಟಗಳು ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು. ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ...
READ MORE