‘ಋಗ್ವೇದ ಸಂಹಿತಾ ಭಾಗ-3’ ಕೃತಿಯು ಹೆಚ್. ಪಿ ವೆಂಕಟರಾವ್ ಶರಣ್ಮಾ ಅವರ ಅನುವಾದಿತ ಕೃತಿಯಾಗಿದೆ. ಪ್ರಥಮಾಷ್ಟಕದಲ್ಲಿ ಎರಡನೇಯ ಅಧ್ಯಾಯವಾಗಿರುವ ಈ ಕೃತಿಯು ಪ್ರಥಮ ಮಂಡಲದ ಸೂಕ್ತಗಳು 20-32 ಅನ್ನು ಒಳಗೊಂಡಿದೆ. ಗ್ರಂಥದ ವಿಷಯ ನಿರೂಪಣೆಯ ವಿಷಯವಾಗಿ ಹಿಂದಿನ ಭಾಗಗಳಲ್ಲಿ ಅನುಸರಿಸುತ್ತಿದ್ದ ಕ್ರಮವನ್ನೇ ಈ ಭಾಗದಲ್ಲಿಯೂ ಅನುಸರಿಸಲಾಗಿದೆ. ಸಮಯೋಚಿತವಾದ ಉಪಾಖ್ಯಾನಗಳನ್ನು ಅಲ್ಲಲ್ಲಿ ಸೇರಿಸಲಾಗಿದೆ. ಈ ಉಪಾಖ್ಯಾನಗಳಲ್ಲಿ ಶುನಕ್ಕೇಪೋಪಾಖ್ಯಾನವು ಬಹುಮುಖ್ಯವಾದುದು. ಮಹಾರಾಜರ ಪಟ್ಟಾಭಿಷೇಕಕಾಲದಲ್ಲಿ ಈ ಉಪಾಖ್ಯಾನದ ವಿನಿಯೋಗವಿರುವುದಲ್ಲದೆ, ಪುತ್ರಸಂಶಾತನವನ್ನಪೇಕ್ಷಿಸುವ ಪ್ರತಿಯೊಬ್ಬರೂ ಈ ಉಪಖ್ಯಾನದ ಶ್ರವಣ ಪಠನಾದಿಗಳನ್ನು ವಿಧ್ಯುಕ್ತವಾಗಿ ಆಚರಿಸಿದಲ್ಲಿ ಅವರ ಇಷ್ಟಾರ್ಥವು ನಿಶ್ಚಯವಾಗಿ ನೇರವೇರುವುದೆಂದು ಶ್ರುತಿಪ್ರಸಿದ್ಧವಾಗಿರುವುದಲ್ಲದೆ, ಈಗಲೂ ಸಹ ಪುತ್ರಸಂತಾನಪ್ರಾಪ್ತಿಗಾಗಿ ಆಶೀರ್ವಾದ ಮಾಡುವ ಸಂದರ್ಭದಲ್ಲಿ ಐತರೇಯ ಬ್ರಾಹ್ಮಣದಲ್ಲಿರುವ ಈ ಉಪಾಖ್ಯಾನದ ಅಂತ್ಯವಾಕ್ಯವಾದ ಸಹಸ್ರಮಾಖ್ಯಾತ್ರೇ ದದ್ಯಾಚ್ಛತಂ ಪ್ರತಿಗರಿಶ್ರ ಏತೇ ಚೈವಾಸನೇ ಶ್ವೇತಶ್ಚಾತ್ವತರೀರಥೋ ಹೋತುಃ ಪುತ್ರಕಾಮಾ ಹಾಪ್ಯಾಖ್ಯಾಪಯೇರಲ್ಲಭಂತೇ ಹ ಪುತ್ರಾಲ್ಲ ಭಂತೇ ಹ ಪುತ್ರಾನ್- ಎಂಬ ವಾಕ್ಯವನ್ನು ಆಶೀರ್ವಾದಮಂತ್ರವನ್ನಾಗಿ ಉಪಯೋಗಿಸುವುದು ಈಗಲೂ ರೂಢಿಯಲ್ಲಿರುವುದು. ಈ ಋಗ್ವೇದ ಗ್ರಂಥ ವಿಭಾಗ ಕ್ರಮದಲ್ಲಿ ಮುದ್ರಣ ಸೌಕರ್ಯಕ್ಕಾಗಿ ಒಂದೊಂದು ಭಾಗದಲ್ಲಿ ಒಂದೊಂದು ಅಧ್ಯಾಯದಂತೆ ಮುದ್ರಿಸಲಾಗಿರುವುದು. ಇದರಲ್ಲಿರುವ 64 ಅಧ್ಯಾಯಗಳೂ ಗ್ರಂಥಪರಿಮಾಣದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಸಮನವಾಗಿರುವುದರಿಂದ ಪ್ರತಿಯೊಂದು ಭಾಗವೂ ಸುಮಾರು 500 ಅಥವಾ 600 ಪುಟಗಳನ್ನೊಳಗೊಂಡಿರುತ್ತದೆ.
©2024 Book Brahma Private Limited.