ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಬದುಕಿನ ಬಗ್ಗೆ ಆಳವಾಗಿ ಅಧ್ಯಯನ ನಡೆಸಿರುವ ಎ.ಆರ್. ವಾಸವಿ ಅವರು ಇಂಗ್ಲಿಷ್‌ನಲ್ಲಿ ಬರೆದ ಲೇಖನಗಳನ್ನು ಎಚ್.ಡಿ. ಪ್ರಶಾಂತ್, ನವೀನ್ ಹಳೇಮನೆ, ಉಷಾ ನರಸಿಂಹನ್, ಶೀನಿವಾಸ ಕಾರ್ಕಳ ಹಾಗೂ ಪ್ರಕಾಶ್ ಕಾಮತ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಡಾ.ಎಚ್ ಡಿ ಪ್ರಶಾಂತ್, 1970 ರ ಡಿಸೆಂಬರ್ 4 ರಂದು ಜನಿಸಿದರು. ಎಂ.ಎ. ಪಿ.ಎಚ್ ಡಿ, ಎಂ ಫಿಲ್ ಪದವೀಧರರು. ಹಂಪಿಯ ಕನ್ನಡ ವಿ.ವಿ. ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಅಭಿವೃದ್ಧಿ ,ಸಮಾಜಶಾಸ್ತ್ರ, ಶೈಕ್ಷಣಿಕ ಸಮಾಜಶಾಸ್ತ್ರ ವಿಷಯಗಳಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ಅಭಿವೃದ್ಧಿ ಸಮಾಜಶಾಸ್ತ್ರ ಹಕ್ಕು ಆಧಾರಿತ ಅಭಿವೃದ್ಧಿ ಮತ್ತು ಪರ್ಯಾಯ ಅಭಿವೃದ್ಧಿ, ನವ ಉದಾರವಾದ, ಅಕ್ಷರ, ಆಹಾರ ಆರೋಗ್ಯದಲ್ಲಿ ಸಮಾನತೆ, ರಾಜಕೀಯ ಆರ್ಥಿಕತೆ, ಶೈಕ್ಷಣಿಕ ಸಮಾಜಸ್ತ್ರ-ಗುಣಾತ್ಮಕ ಸಾರ್ವತ್ರೀಕರಣಕ್ಕೆ ಇರುವ ಸವಾಲುಗಳು, ಶಾಲೆ- ಶಿಕ್ಷಣದ ವಿಕೇಂದ್ರೀಕರಣ, ಗ್ರಾಮ ಮತ್ತು ಕೃಷಿ ಸಮಾನ ಅಧ್ಯಯನ- ಜಾಗತಿಕ ಮಾರುಕಟ್ಟೆ ಮತ್ತು ...
READ MORE