’ಜ್ಹೆನ್ ಅನುಭವ’ ಮಹೋತ್ತಮ ಜ್ಹೆನ್ ಗುರುಗಳ ಜೀವನ ಹಾಗೂ ಬೋಧನೆಗಳ ಮೂಲಕ ಅದರ ಐತಿಹಾಸಿಕ ವಿಕಾಸದ ಚಿತ್ರಣವನ್ನು ಪರಿಚಯಿಸುವ ಕೃತಿ.
ಬೌದ್ಧ ಧರ್ಮದ ದಂತಕತೆಗಳಲ್ಲಿ ಕಂಡುಬರುವ ಘಟನಾವಳಿಗಳಲ್ಲಿ ಒಮ್ಮೆ ಭಗವಾನ್ ಬುದ್ಧನಿಗೆ ಹೂವೊಂದನ್ನು ಅರ್ಪಿಸಿ ಅದರ ಮೇಲೆ ಬೋಧಿಸುವಂತೆ ಕೋರಲಾಗುತ್ತದೆ. ಕಥೆಯ ಪ್ರಕಾರ ಬುದ್ಧ ಆ ಮೊಗ್ಗನ್ನು ಶಬ್ಧರಹಿತನಾಗಿ ಸ್ವೀಕರಿಸುತ್ತಾನೆ ಮತ್ತು ನಿಶ್ಯಬ್ಧವಾಗಿ ಅದನ್ನು ತನ್ನ ಕೈಗಳಲ್ಲೇ ತಿರುಗಿಸತೋಡಗುತ್ತಾನೆ. ನಂತರ ಅದೇ ನೀರವತೆಯಲ್ಲಿ ಬುದ್ಧನ ಅಗ್ರಗಾಣಿ ಶಿಷ್ಯನಾದ, ಕಾಶ್ಯಪನು ಹಠತ್ತಾಗಿ ಒಮ್ಮೆಲೆ ಮುಗುಳ್ನಗೆ ಸೂಸುತ್ತಾನೆ. ಈ ರೀತಿಯಾಗಿ ಜ್ಹೆನ್ ನ ಮೌನವಾದ ವಿವೇಕವು ಜನ್ಮ ತಾಳುತ್ತದೆ. ಪ್ರಸ್ತುತ ಕೃತಿ ಮಹೋತ್ತಮ ಜ್ಹೆನ್ ಗುರುಗಳ ಜೀವನ ಹಾಗೂ ಬೋಧನೆಗಳ ಮೂಲಕ ಅದರ ಐತಿಹಾಸಿಕ ವಿಕಾಸದ ಚಿತ್ರಣವನ್ನು ನೀಡುತ್ತದೆ.
©2024 Book Brahma Private Limited.