‘ನಾಥ ಸಂಪ್ರದಾಯದ ಇತಿಹಾಸ’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಐತಿಹಾಸಿಕ ಕೃತಿಯಾಗಿದೆ. ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿದ್ದ ಬಹುಹಿಂದಿನ ನಾಥ ಸಂಪ್ರದಾಯದ ಇತಿಹಾಸವನ್ನು ತಿಳಿಸಿಕೊಡುವ ಪುಸ್ತಕ. ಮಂದ್ರನಾಥ, ಗೋರಖನಾಥರಂಥವರ ಉಲ್ಲೇಖಗಳಿರುವ ಇಂಥ ಯೋಗಿಗಳ ಗುರುಪರಂಪರೆಯಲ್ಲಿ ಮುಂದುವರೆದಂತೆ ಜ್ಞಾನದೇವ-ನಾಮದೇವ ಕಬೀರ್ - ನಾನಕ್ ರವರ ಹೆಸರುಗಳೂ ಸೇರ್ಪಡೆಯಾಗಿವೆ.
ಹೊಸತು - ಮೇ -2005
ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿದ್ದ ಬಹುಹಿಂದಿನ ನಾಥ ಸಂಪ್ರದಾಯದ ಇತಿಹಾಸವನ್ನು ತಿಳಿಸಿಕೊಡುವ ಪುಸ್ತಕ. ಮಂದ್ರನಾಥ, ಗೋರಖನಾಥರಂಥವರ ಉಲ್ಲೇಖಗಳಿರುವ ಇಂಥ ಯೋಗಿಗಳ ಗುರುಪರಂಪರೆಯಲ್ಲಿ ಮುಂದುವರೆದಂತೆ ಜ್ಞಾನದೇವ-ನಾಮದೇವ ಕಬೀರ್ - ನಾನಕ್ ರವರ ಹೆಸರುಗಳೂ ಸೇರ್ಪಡೆಯಾಗಿವೆ. ಅನೇಕ ವಾಮಾಚಾರ, ತಂತ್ರಸಿದ್ಧಿಗಳನ್ನೊಳ ಗೊ೦ಡ ಸಾಧನಾ ತಪಸ್ಸಿನಲ್ಲಿ ಸಾಕಷ್ಟು ಗೊಂದಲಗಳೂ ಶಾಖಾಭೇದಗಳೂ ಕ್ರಮೇಣ ಉದ್ಭವಿಸಿದ್ದು ಮುಂದೆ ಗೋರಕ್ಷನಾಥನು ಈ ಸಾಧನೆಗಳನ್ನು ಶುದ್ದೀಕರಣ ಮಾಡಿದನೆಂದು ಹೇಳಲಾಗುತ್ತಿದೆ. ನಾಥ ಪಂಥ ಬೆಳೆಸಲು ಕಾರಣರಾದ ಅನೇಕ ಸಂತರನ್ನು ಅವರ ಸಮಕಾಲೀನ ಸಾಮಾಜಿಕ ಪರಿಸರದೊಂದಿಗೆ ಪರಿಚಯಿಸಲಾಗಿದೆ. ಸಿದ್ಧರು, ತಪಸ್ವಿಗಳು ಮತ್ತು ಅವಧೂತರು ಸಾಕಷ್ಟು ಇರುವ ಈ ಪಂಥ ಭಾರತೀಯ ಪ್ರಾಚೀನ ಪ್ರಜೆಗಳನ್ನು ಹೇಗೆ ಮೋಡಿ ಮಾಡಿರಬಹುದೆಂಬುದು ಕುತೂಹಲದ ಅಂಶ.
©2024 Book Brahma Private Limited.