ಅಂಬೇಡ್ಕರ್ ಜಗತ್ತು

Author : ವಿಕಾಸ್ ಆರ್ ಮೌರ್ಯ

Pages 286

₹ 395.00




Year of Publication: 2023
Published by: ಜೀರುಂಡೆ ಪುಸ್ತಕ
Address: ನಂ.42, 9ನೇ ಅಡ್ಡರಸ್ತೆ, ಗಂಗೊಂಡನಹಳ್ಳಿ ಮುಖ್ಯರಸ್ತೆ, ಇಂದಿರಾನಗರ, ದೊದ್ದಬಿದರುಕಲ್ಲು, ಬೆಂಗಳೂರು- 560073
Phone: 9742225779

Synopsys

‘ಅಂಬೇಡ್ಕರ್ ಜಗತ್ತು’ ಬಾಬಾಸಾಹೇಬ್ ಮತ್ತು ದಲಿತ ಚಳವಳಿ ರೂಪುಗೊಂಡ ಕಥನ ಎಲಿನಾರ್ ಝೆಲಿಯೇಟ್ ಅವರ 'Ambedkar's World: The making of Babasaheb Ambedkar and the Dalit movement' ಕೃತಿಯ ಕನ್ನಡಾನುವಾದ. ಲೇಖಕ ವಿಕಾಸ್ ಆರ್. ಮೌರ್ಯ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಗೆ ಹಿರಿಯ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘1960 ರ ದಶಕದಲ್ಲಿ ಸಂಶೋಧನಾ ಪ್ರಬಂಧವಾಗಿ ಎಲೀನರ್ ಝೆಲಿಯೇಟ್ ಅವರು ಬರೆದ ಈ ಕೃತಿಯು ಹಲವು ಬಗೆಯಲ್ಲಿ ದಲಿತ ಅಧ್ಯಯನಗಳ ಬುನಾದಿಯಾಗಿದೆ. ಮಹಾರಾಷ್ಟ್ರದ ಮಹಾರ್ ಜನಾಂಗವು ಶಿಕ್ಷಣ, ಸಂಘಟನೆ ಹಾಗೂ ಹೋರಾಟಗಳ ಮೂಲತ ತನ್ನನ್ನು ಒಂದು ರಾಜಕೀಯ ಶಕ್ತಿಯಾಗಿ ರೂಪಿಸಿಕೊಂಡ ಕಥನದ ಮೂಲಕ ಅಂಬೇಡ್ಕರ್ ಅವರ ಅಪ್ರತಿಮ ರಾಜಕೀಯ ಚಿಂತನೆ ಹಾಗೂ ಕ್ರಿಯಾಶೀಲತೆಯ ವಸ್ತುನಿಷ್ಠ ಅಧ್ಯಯನವಾಗಿದೆ. ರಾಜಕೀಯ ಚರಿತ್ರೆ ಹಾಗೂ ವಿಶ್ಲೇಷಣೆಯಲ್ಲಿ ಇದೊಂದು ಮೈಲಿಗಲ್ಲು’ ಎಂದಿದ್ದಾರೆ.

ಜೊತೆಗೆ ವ್ಯಕ್ತಿ ಕೇಂದ್ರಿತ ನಾಯಕ ಆರಾಧನೆಯೆ ಮುಖ್ಯವಾದ ಮಾದರಿಯಾಗಿದ್ದ ಕಾಲದಲ್ಲಿ ಎಲೀನರ್ ಜಾತಿವ್ಯವಸ್ಥೆ ಹಾಗೂ ಅಸ್ಪುೃಶ್ಯತೆಗಳ ತೀವ್ರ ಅಸಮಾನತೆಯ ಸಮಾಜವೊಂದರಲ್ಲಿ ವಸಾಹತುಶಾಹಿ, ಆಧುನಿಕತೆ, ನಗರೀಕರಣ ಇವುಗಳ ಪ್ರಭಾವದಲ್ಲಿ ವಿಶಾಲ ಅರ್ಥದ ರಾಜಕೀಯ ಹೋರಾಟವೊಂದರ ಭಾಗವಾಗಿ ಒಂದು ಸಮುದಾಯವು ಹೊಂದುವ ಪರಿವರ್ತನೆಯನ್ನು ದಾಖಲಿಸುತ್ತಾರೆ. ಹೀಗಾಗಿ ಇದು ಒಂದು ಯುಗ ಹಾಗೂ ಯುಗಧರ್ಮದ ಚರಿತ್ರೆಯೂ ಆಗಿದೆ. ಇದರಿಂದಾಗಿ ಅಂಬೇಡ್ಕರ್ ಅವರ ಚಿಂತನೆ ಹಾಗೂ ಕ್ರಿಯೆಗಳನ್ನು ಚರಿತ್ರೆಯ ಸಂದರ್ಭದಲ್ಲಿಟ್ಟು ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

ಅಂಬೇಡ್ಕರ್ ಅವರ ಚಿಂತನೆ ಭಾರತೀಯ ರಾಜಕೀಯವನ್ನು ಮೂಲಭೂತವಾಗಿ ಪುನರ್ ರಚಿಸಿದ ಬಗೆಯೂ ಸ್ಪಷ್ಟವಾಗುತ್ತದೆ. ಧರ್ಮ, ನಂಬಿಕೆ, ಸಿದ್ಧಾಂತಗಳು, ಬೌದ್ಧಿಕ, ಆರ್ಥಿಕ, ರಾಜಕೀಯ ಹಕ್ಕುಗಳು, ಸ್ವಾತಂತ್ರ್ಯ ಸಮಾನತೆಯ ಮುಗಿಯದ ಹೋರಾಟಗಳು- ಇವು ಭಾರತದ ಮಟ್ಟಿಗೆ ಅಂಬೇಡ್ಕರ್ ಮುನ್ನೆಲೆಗೆ ತಂದ ವಿಷಯಗಳು. ಆದ್ದರಿಂದಲೇ ನಾವು ಬದುಕುತ್ತಿರುವುದು ಅಂಬೇಡ್ಕರ್ ಭಾರತದಲ್ಲಿ. ವಸ್ತುನಿಷ್ಠವಾಗಿ, ಸರಳವಾಗಿ, ಆಪ್ತವಾಗಿ ಅಂಬೇಡ್ಕರ್ ಜೀವನ ಮತ್ತು ರಾಜಕೀಯವನ್ನು ಆಕರ್ಷಕ ಕಥನವಾಗಿಯೂ ಹೇಳುವ ಈ ಕೃತಿಯನ್ನು ವಿಕಾಸ್ ಮೌರ್ಯ ಅವರು ಅದ್ಭುತವಾಗಿ ಅನುವಾದಿಸಿದ್ದಾರೆ. ಅಕ್ಷರ ಬಲ್ಲ ಪ್ರತಿಯೊಬ್ಬರು ಓದಲೇ ಬೇಕಾದದ ಮಾತ್ರವಲ್ಲ, ನಿರಂತರ ಸಂಗಾತಿಯಾಗಿ ಜೊತೆಗಿಟ್ಟುಕೊಳ್ಳಬೇಕಾದದ ಕೃತಿಯಿದು. ದ್ವೇಷ, ಗೊಂದಲಗಳ ಸಂತೆಯ ನಮ್ಮ ಕಾಲದಲ್ಲಿ ಈ ಕೃತಿಯನ್ನು ಓದುವುದೇ ಸಮಾಜ ಹಾಗೂ ಸಂಸ್ಕೃತಿಗಳ ಆರೋಗ್ಯದ ಕಡೆಗೆ ದೊಡ್ಡ ಹೆಜ್ಜೆಯನ್ನು ಇಟ್ಟಂತೆ ಎಂದಿದ್ದಾರೆ ಪ್ರೊ. ರಾಜೇಂದ್ರ ಚೆನ್ನಿ.

About the Author

ವಿಕಾಸ್ ಆರ್ ಮೌರ್ಯ
(08 June 1981)

ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಹುಟ್ಟೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹೊಸಹಳ್ಳಿ. ಬೆಳೆದದ್ದು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಲೇಖನಗಳ ಸಂಗ್ರಹ ‘ಚಮ್ಮಟಿಕೆ’ ಕೃತಿಯನ್ನು ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಜೊತೆಗೆ ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು 'ಕಪ್ಪು ಕುಲುಮೆ' ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. 'ಕಪ್ಪು ಕುಲುಮೆ'ಯನ್ನೂ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ.  ಹಾಗೇ 'ನೀಲವ್ವ' ...

READ MORE

Related Books