‘ಕೆಲವು ಸಾಮಾನ್ಯ ಕಾಯಿಲೆಗಳು’ ಅನಿಲ್ ಅಗರವಾಲ್ ಅವರ ಮೂಲ ಕೃತಿಯಾಗಿದ್ದು, ಕೆ.ಬಿ. ರಾಮಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; “ನನ್ನ ಮೇಲಧಿಕಾರಿಯನ್ನು ಕಂಡರೆ ನನಗೆ ಅಲರ್ಜಿಯಾಗುತ್ತದೆ”, “ನನ್ನ ಅತ್ತೆಯನ್ನು ಕಂಡರೆ ನನಗೆ ಅಲರ್ಜಿಯಾಗುತ್ತದೆ' ಮುಂತಾದ ಮಾತುಗಳನ್ನು ನಿತ್ಯಜೀವನದಲ್ಲಿ ನಾವು ಆಗಾಗ ಕೇಳುತ್ತಿರುತ್ತೇವೆ. ಇಂತಹ ಸಂದರ್ಭಗಳಲ್ಲಿ 'ಅಲರ್ಜಿ' ಎಂಬ ಪದವನ್ನು 'ಇಷ್ಟವಿಲ್ಲದ್ದು' ಎಂಬುದರ ಅನ್ವರ್ಥಕವಾಗಿ ಬಳಸಲಾಗುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಈ ಪದಕ್ಕೆ ಸ್ವಲ್ಪ ಮಟ್ಟಿನ ಭಿನ್ನ ರೀತಿಯ ಅರ್ಥವಿರುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಪರಾಗ, ಪ್ರಾಣಿಯ ತುಪ್ಪಳ, ಸಾಬೂನಿನ ಪುಡಿ, ಮೊಟ್ಟೆ ಮುಂತಾದ ವಸ್ತುಗಳ ಸಂಪರ್ಕದಿಂದ ಯಾವುದೇ ರೀತಿಯ ಅಹಿತಕರ ಪರಿಣಾಮಗಳನ್ನು ಪಡೆಯುವುದಿಲ್ಲ. ಆದರೆ ಸುಮಾರು ಶೇಕಡಾ ಇಪ್ಪತ್ತರಷ್ಟು ಜನರಲ್ಲಿ ಈ ವಸ್ತುಗಳು ಒಂದಲ್ಲ ಒಂದು ರೀತಿಯ ಅಹಿತಕರ ಪರಿಣಾಮಗಳನ್ನು ಉಂಟು ಮಾಡುತ್ತವೆ. ಇಂತಹ ವ್ಯಕ್ತಿಗಳು ಪರಾಗ ಅಥವಾ ಪ್ರಾಣಿಯ ತುಪ್ಪಳವನ್ನು ಶ್ವಾಸದೊಂದಿಗೆ ಆಘ್ರಾಣಿಸಿದಾಗ ತೀವ್ರತರದ ಉಸಿರಾಟದ ತೊಂದರೆಯನ್ನು ಅನುಭವಿಸಬಹುದು ಇಲ್ಲವೆ ಆಭರಣ, ಸಾಬೂನಿನ ಪುಡಿ ಮುಂತಾದ ವಸ್ತುಗಳನ್ನು ಚರ್ಮಕ್ಕೆ ತಾಗಿಸಿಕೊಂಡಾಗ ಚರ್ಮದ ಮೇಲೆ ತುರಿಕೆಯಿಂದ ಕೂಡಿದ ಗುಳ್ಳೆಗಳು ಏಳಬಹುದು ಎಂದು ತಿಳಿಸಿದ್ದಾರೆ.
©2024 Book Brahma Private Limited.