ನೀಲಿ ಸರೋವರ

Author : ಚಿದಾನಂದ ಸಾಲಿ

Pages 1

₹ 15.00




Year of Publication: 2011
Published by: ನ್ಯಾಷನಲ್ ಬುಕ್ ಟ್ರಸ್ಟ್
Address: ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನೆಹರೂ ಭವನ, 5, ಇನ್ ಸ್ಟಿಟ್ಯೂಷನಲ್ ಏರಿಯಾ, 2ನೇ ಹಂತ, ವಸಂತ್ ಕುಂಜ್, ನವದೆಹಲಿ -110070
Phone: 91 11 26707700

Synopsys

ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿನ ಹೆಸರಾಂತ ಲೇಖಕ ಕಮಲೇಶ್ವರ್ ಅವರು ರಚಿಸಿದ  ’ನೀಲಿ ಜಲ್’  ಎನ್ನುವ ಹಿಂದಿ ಕಥೆಯನ್ನು ಕನ್ನಡಕ್ಕೆ ಅನುವಾದ ಮಾಡಿದವರು ಚಿದಾನಂದ ಸಾಲಿ.  ಕೆ.ಕೆ. ಬಿರ್ಲಾ ಅನುಷ್ಠಾನದ ಅನುದಾನ ವತಿಯಿಂದ ’ನೀಲಿ ಸರೋವರ’ ಪುಸ್ತಕವನ್ನು ಪ್ರಕಟಿಸಲಾಗಿದೆ. ಕಥನ ಶೈಲಿಯುಳ್ಳ  ಪುಸ್ತಕದ ನಿರೂಪಣೆ ಮಕ್ಕಳ ಸಾಹಿತ್ಯಕ್ಕೂ ಹೋಲುವಂತದ್ದು. ಕಥೆಗಳಲ್ಲಿನ ಪಾತ್ರ ಸೃಷ್ಟಿ ಸರಳವಾದರೂ ನಮ್ಮ ಸುತ್ತಮುತ್ತಲಿನ ವಾತಾವರಣದ ಘಟನೆಗಳನ್ನು ಕಥೆಯ ವಸ್ತುಗಳ ಮೂಲಕ  ಚಿತ್ರಿಸಿದ್ಧಾರೆ. ’ನೀಲಿ ಸರೋವರ’ ಎನ್ನುವುದು ಸಣ್ಣಪುಟ್ಟ ಸಂಗತಿಗಳನ್ನು, ಕತೆಯೊಳಗಿನ ಮತ್ತೊಂದು ಕತೆಯನ್ನು ಸೃಷ್ಟಿಸಿ, ಬೆರಗು, ಕುತೂಹಲಗಳಿಂದ ಹೆಣೆದಿರುವ ರಚನೆಯಾಗಿದೆ. 

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Related Books