"ಜನರೊಂದಿಗೆ ವನ್ಯಜೀವ" ಕೃತಿಯು ಮಕ್ಕಳ ಕಥಾಸಂಕಲನವಾಗಿದ್ದು ’ನಾಗೇಶ್ ಹೆಗಡ”ಯವರು ವಿವಿಧ ಭಾಷೆಗಳ ಮಕ್ಕಳ ಕತೆಯನ್ನು ಕನ್ನಡಕ್ಕೆ ಬಹಳ ಸೊಗಸಾಗಿ ಅನುವಾದಿಸಿದ್ದಾರೆ. ಮಕ್ಕಳ ಮತ್ತು ನಿಸರ್ಗದ ನಡುವೆ ಒಲವಿದ್ದು ಅದನ್ನು ಉಳಿಸುವ ಪ್ರಯತ್ನವಾಗಬೇಕಾದರೆ ಮೊದಲು ಪ್ರಕೃತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂಬುವವರು ಇದನ್ನು ಮಕ್ಕಳಿಗೆ ಓದಲಿಕ್ಕೆ ನೀಡಬಹುದು. ಜೀವ ವೈವಿಧ್ಯತೆಯ, ಜೀವ ಸಂಕುಲಗಳ ಬಗ್ಗೆ, ಕೇವಲ ಅರಣ್ಯಗಳಷ್ಟೇ ಅಲ್ಲ, ಹುಲ್ಲುಗಾವಲು, ಶುಷ್ಕ ಬಯಲು, ಮರಳುಗಾಡು, ನದಿ, ಕೊಳ್ಳ ಸಮುದ್ರ, ಹಳ್ಳಿಗಳಿಗೂ, ನಗರಗಳಿಗೂ ಇರುವ ಅವಿನಾಭಾವ ಸಂಬಂಧವನ್ನುಇಲ್ಲಿ ಲೇಖಕರು ಕಥೆಗಳ ಮೂಲಕ ಮಾಹಿತಿ ನೀಡಿದ್ದಾರೆ. ಬಹು ಸುಲಭವಾಗಿ ಮಕ್ಕಳಿಗೆ ಅರ್ಥವಾಗುವಂತಹ ಮಕ್ಕಳ ಹತ್ತು ಕಥೆಗಳಿವೆ.
ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...
READ MORE