ಲೇಖಕ ಕೆ. ವಿ. ನಾರಾಯಣ ಅವರ ಅನುವಾದ ಕೃತಿ ʻಬುದ್ದಿಜೀವಿ ಬಿಕ್ಕಟ್ಟುಗಳುʼ. ಕೃತಿಯ ಮೂಲ ಲೇಖಕ ಜೀನ್ ಪಾಲ್ ಸಾರ್ತೃ ಅವರ ‘ಎ ಪ್ಲೀ ಫಾರ್ ಇಂಟಲೆಕ್ಚುವಲ್ʼ ಎಂಬ ಬರಹವು , ಕನ್ನಡಕ್ಕೆ ನಿರೂಪಣೆಮಾಡಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ, “ಎಲ್ಲ ಬುದ್ದಿಜೀವಿಗಳಲ್ಲೂ ಕೂಡ ಒಂದು ಸಾಮಾನ್ಯ ನೆಲೆಯನ್ನು ಗುರುತಿಸಬಹುದು: ಬುದ್ದಿಜೀವಿಗಳು ತಮ್ಮದಲ್ಲದ ಕಾರ್ಯಕ್ಷೇತ್ರದಲ್ಲಿ ತಲೆ ತೂರಿಸುವವರು. ಅಲ್ಲದೆ ತಾವು ಯಾವಾಗಲೂ ಸ್ಥಾಪಿತ ಸತ್ಯಗಳನ್ನು ಪ್ರಶ್ನಿಸುತ್ತೇವೆಂದು ಹೇಳುವವರು ಮತ್ತು ಈ ಸ್ಥಾಪಿತ ಸತ್ಯಗಳಿಂದ ಪ್ರೇರಿತವಾದ ವರ್ತನೆಗಳನ್ನು ಕೂಡ ಪ್ರಶ್ನಿಸುವವರು. ಹೀಗೆ ಮಾಡಲು ಅವರು ಮಾನವ ಜನಾಂಗ ಮತ್ತು ಸಮಾಜಗಳಿಗೆ ಸಂಬಂಧಿಸಿದಂತೆ ಒಂದು ಸಾರ್ವತ್ರಿಕವಾಗಿ ಸಮ್ಮತವಾಗಿರುವ ನೆಲೆಯೊಂದು ಇದೆಯೆಂದು ನಂಬಿ, ಅದನ್ನು ಆಧರಿಸಿ, ತಮ್ಮ ಈ ಪ್ರಶ್ನಿಸುವ ಪ್ರವೃತ್ತಿಯನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಅವರ ಈ ನಂಬಿಕೆಗೆ ಈಗ ಯಾವ ಬುನಾದಿಯೂ ಇಲ್ಲ. ಅವರು ಪ್ರತಿಪಾದಿಸುತ್ತಿರುವ ಆ ಸಾರ್ವತ್ರಿಕವಾದ ನೆಲೆಯು ಒಂದು ಅಮೂರ್ತವಾದ ಮತ್ತು ಹುಸಿಯಾದ ನಂಬಿಕೆ. ಏಕೆಂದರೆ ಕೈಗಾರಿಕೀಕರಣಗೊಂಡ ನಾಡುಗಳು ಅತ್ಯಂತ ವೈವಿಧ್ಯಮಯವಾದ ಜೀವನ ಕ್ರಮಗಳನ್ನು, ಸಾಮಾಜಿಕ ಕಾರ್ಯವಿಧಾನಗಳನ್ನು ಮತ್ತು ಅತ್ಯಂತ ನಿರ್ದಿಷ್ಟ ಸಮಸ್ಯೆಗಳನ್ನು ಹುಟ್ಟುಹಾಕಿವೆ. ಇದರಿಂದಾಗಿ ಜಾಗತಿಕವಾಗಿ ಅನ್ವಯವಾಗುವ ನೆಲೆಗಳು ಅಮೂರ್ತವಾಗುತ್ತಿವೆ” ಎಂದು ಹೇಳಿದ್ದಾರೆ.
©2024 Book Brahma Private Limited.