‘ಪ್ರಾಚೀನ ಲೇಖನ ಸಾಮಗ್ರಿಗಳು’ ಡಾ. ಆಲ್ಪರ್ಚಿನ್ ಗೌರ್ ಅವರ ಕೃತಿಯ ಕನ್ನಡಾನುವಾದ. ಈ ಕೃತಿಯನ್ನು ಲೇಖಕ ಡಾ. ಶ್ರೀನಿವಾಸ ಹಾವನೂರ ಹಾಗೂ ಡಾ.ಲಕ್ಷ್ಮೀನಾರಾಯಣ ಆರೋರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಂಡನ್ ಮೂಲದ ಖ್ಯಾತ ವಿದ್ವಾಂಸರಾದ ಡಾ. ಆಲ್ಪರ್ಟಿನ್ ಗೌರ್ ಅವರ writing matrials of the east ಎನ್ನುವ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ನಾಡಿನ ಹಿರಿಯ ವಿದ್ವಾಂಸರಾದ ಡಾ. ಶ್ರೀನಿವಾಸ ಹಾವನೂರ ಮತ್ತು ಡಾ.ಲಕ್ಷ್ಮೀನಾರಾಯಣ ಆರೋರಾ ಅವರು ಕನ್ನಡದ ತಿಳುವಳಿಕೆ ಹೊರಗಿನವರಿಗೆ ತಲುಪಬೇಕು. ಹೊರಗಿನ ತಿಳುವಳಿಕೆ ಕನ್ನಡದ ಮೂಲಕ ಒಳಗೆ ಬರಬೇಕು ಎನ್ನುವ ಕನ್ನಡ ವಿಶ್ವವಿದ್ಯಾಲಯದ ಆಲೋಚನಾ ಕ್ರಮಕ್ಕೆ ಈ ಕೃತಿಯು ಉತ್ತಮ ನಿದರ್ಶನವಾಗಿದೆ. ಬರೀ ಕನ್ನಡಕ್ಕೆ ಸೀಮಿತವಾಗಿದ್ದ ಹಸ್ತಪ್ರತಿ ಅಧ್ಯಯನ ಕ್ಷೇತ್ರಕ್ಕೆ ಈ ಕೃತಿ ಕನ್ನಡೀಕರಣಗೊಳ್ಳುವ ಮೂಲಕ ಪ್ರಪಂಚ ವ್ಯಾಪ್ತಿಯ ಅನುಭವ ಪ್ರಾಪ್ತವಾಗಿದೆ. ಜಾಗತಿಕ ಮಟ್ಟದಲ್ಲಿನ ಹಸ್ತಪ್ರತಿಗಳ ಸ್ವರೂಪ, ಬರವಣೆಗೆಯ ಸಾಧನಗಳು, ಮಾದರಿಗಳು, ಬಳಸುವ ಪದಾರ್ಥಗಳು, ಲಿಪಿಕಾರರು ಹೀಗೆ ಅನೇಕ ರೀತಿಯ ಸಂಗತಿಗಳನ್ನು ಈ ಕೃತಿ ಗರ್ಭೀಕರಿಸಿಕೊಂಡಿದೆ. ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ತನ್ನ ಅಧ್ಯಯನದ ಎಲ್ಲೆಯನ್ನು ಕನ್ನಡದ ಮೂಲಕ ಜಾಗತಿಕಗೊಳಿಸಬೇಕು, ಹೊರಗಿನ ಅನುಭವಗಳನ್ನು ಪಡೆದುಕೊಳ್ಳುವ ಮೂಲಕ ಈ ಅಧ್ಯಯನ ಕ್ಷೇತ್ರಕ್ಕೆ ವಿಸ್ತಾರತೆಯನ್ನು ತಂದುಕೊಳ್ಳಬೇಕೆನ್ನುವ ಆಶಯವುಳ್ಳದ್ದಾಗಿದೆ ಎಂದಿದ್ದಾರೆ ಡಾ.ವಿರೇಶ ಬಡಿಗೇರ.
©2024 Book Brahma Private Limited.