ಲೇಖಕ ಎಸ್. ಉಮೇಶ್ ಅವರ ಮೆಲೂಹದ ಮೃತ್ಯುಂಜಯ ಕೃತಿಯು ಶಿವ ಸರಣೀಯ ಮೊದಲ ಕೃತಿಯಾಗಿದೆ. 2010ರಲ್ಲಿ ಆಂಗ್ಲ ಲೇಖಕ ಅಮೀಶ್ ತ್ರಿಪಾಠಿ ಬರೆದ ಕೃತಿಯನ್ನು 2013ರಲ್ಲಿ ಎಸ್. ಉಮೇಶ್ ಕನ್ನಡಕ್ಕೆ ಅನುವಾದಿಸಿದರು. ಶಿವ ಸಂಚಿಕೆಯ ಈ ಸರಣಿಯಲ್ಲಿ 26 ಅಧ್ಯಾಯಗಳಿವೆ. ಕೃತಿಯ ಪರಿವಿಡಿಯಲ್ಲಿ ಸೂಚಿಸಿರುವಂತೆ ಸಂಭವಾಮಿ ಯುಗೇ ಯುಗೇ, ಪುಣ್ಯಭೂಮಿ, ಶಿವನ ಬದುಕಿಗೆ ಅವಳ ಆಗಮನ, ಭೂಲೋಕದ ಸ್ವರ್ಗ, ಬ್ರಹ್ಮ ಸಂತತಿ, ವಿಕರ್ಮ- ಮೆಲೂಹದ ನತದೃಷ್ಟ ಜನ, ಶ್ರೀರಾಮ ಉಳಿಸಿಹೋದ ಕಾಯಕ , ಸೋಮರಸ-ದೇವರಸ, ಪ್ರೀತಿ ಮತ್ತು ಅದರ ಅಗಾಧ ಶಕ್ತಿ, ಮರಳಿ ಬಂದ ಮುಸುಕುಧಾರಿ, ಸೂರ್ಯವಂಶಿಗಳ ಕಣ್ಮಣಿಯಾದ ನೀಲಕಂಠ, ಮೆಲೂಹದಲ್ಲಿ ಶಿವನ ಪಯಣ ಹೀಗೆ ಅನೇಕ ಶೀರ್ಷಿಕೆಗಳಿಲ್ಲಿವೆ. ‘ಶಿವ ನಾವು ಕಲ್ಪಿಸಿಕೊಂಡಿರುವಂತಹ ದೇವರಾಗಿರದೆ ಒಂದಾನೊಂದು ಕಾಲದಲ್ಲಿ ಎಲ್ಲರಂತೆ ರಕ್ತ, ಮಾಂಸದಿಂದ ಕೂಡಿದ ಮಾನವನಾಗಿದ್ದಿರಬಹುದಲ್ಲವೇ? ಆತನೇ ನಾನು ಮಾಡಿದ ಸತ್ಕರ್ಮಗಳಿಂದ ದೈವತ್ವಕ್ಕೇರಿ ನಮಗೆ ಮಹಾದೇವನಾಗಿ ಕಂಡಿರಬಹುದಲ್ಲವೇ? ಇಂತಹ ಚಿಂತನೆಯ ಸುತ್ತ ಹೆಣೆದಿರುವ ರೋಚಕ ಕಾಲ್ಪನಿಕ ಕಥೆಯೇ ಈ ಪುಸ್ತಕದ ಜೀವಾಳ, ಭಾರತ ದೇಶದ ಭವ್ಯ ಇತಿಹಾಸ, ಶ್ರೀಮಂತ ಸಂಸ್ಕೃತಿ ಮತ್ತು ಐತಿಹಾಸಿಕ ಹಿನ್ನೆಲೆ ಈ ಮೂರೂ ಮಿಳಿತಗೊಂಡು ಸೃಷ್ಟಿಯಾಗಿರುವ ಕೃತಿಯೇ 'ಮೆಲೂಹದ ಮೃತ್ಯುಂಜಯ'. ಅಂತೆಯೇ ಈ ಕೃತಿಯ ಪ್ರತಿ ಅಧ್ಯಾಯದಲ್ಲಿರುವುದು ಶಿವನ ಬದುಕು ಮತ್ತು ಅದು ನಮಗೆ ಕಲಿಸುತ್ತಿರುವ ಜೀವನ ಪಾಠಗಳು. ಒಂದೊಂದೂ ನಮ್ಮ ಅಜ್ಞಾನದ ಫಲವಾಗಿ ಕಾಲಗರ್ಭದಲ್ಲಿ ಹುದುಗಿಹೋಗಿರುವ ಜೀವನ ಸತ್ಯಗಳು, ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿ ಅಡಗಿರುವ ದೈವತ್ವದ ಗುಣಗಳನ್ನು ಬಡಿದೆಬ್ಬಿಸಬಲ್ಲ ಅಪೂರ್ವ ಚಿಂತನೆಗಳು. ಮಾನವನನ್ನು ದೈವತ್ವದೆಡೆಗೆ ಕರೆದೊಯ್ಯಬಲ್ಲ ಸಾಧನಗಳು, ಹಾಗಾಗಿ ಈ ಪುಸ್ತಕ ಆ ಹರ ಹರ ಮಹಾದೇವನಿಗೆ ಸಮರ್ಪಿತ.’ ಎಂಬುದು ಅನುವಾದಕನ ಮಾತು..
©2024 Book Brahma Private Limited.