‘ದೈವಿಕ ಹೂವಿನ ಸುಗಂಧ : ಭಕ್ತಿಲೀಲೆಯ ವಿಶ್ವರೂಪ’ ಲೇಖಕ ಕೇಶವ ಮಳಗಿ ಅವರು ರಚಿಸಿರುವ ಭಕ್ತಿ ಮತ್ತು ಸೂಫಿ ಕಾವ್ಯದ ಅನುವಾದ. ಈ ಕೃತಿಗೆ ಹಿರಿಯ ಸಾಹಿತಿ ಎಚ್.ಎಸ್. ಶಿವಪ್ರಕಾಶ್ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಈ ಕೃತಿಯ ರಚನಕಾರರು ಮತ್ತು ಪ್ರಚುರಕರ್ತರಿಬ್ಬರೂ ಈ ಸಂದರ್ಭದಲ್ಲಿ ಅಭಿನಂದನಾರ್ಹರು. ಯಾಕೆಂದರೆ ಇಷ್ಟೊಂದು ಸಮರ್ಪಕವಾದ, ಸಮಗ್ರವಾದ, ಸರ್ವಗ್ರಾಸಿಯಾದ ವಾಚಿಕೆ ಇಂಗ್ಲಿಷಿನಲ್ಲೂ ತೀರಾ ಅಪರೂಪವಾಗಿದ್ದು, ಕನ್ನಡದಲ್ಲಂತೂ ನನ್ನ ಕಣ್ಣಿಗೆ ಈ ವರೆಗೆ ಬಿದ್ದಿಲ್ಲ. ಈ ಸಂಕಲನದ ಮುಖ್ಯ ಸಾಧನೆಯೆಂದರೆ ಭಕ್ತಿಯ ಏಕತೆಗೆ ಒತ್ತು ನೀಡುತ್ತಲೇ ಅದರ ಏಕತೆಯನ್ನು ಎಳೆದಪ್ದದ ಹಾಗೆ ಬಿಂಬಿಸಿರುವುದು’ ಎನ್ನುತ್ತಾರೆ ಎಚ್.ಎಸ್. ಶಿವಪ್ರಕಾಶ್. ಶೈವ, ವೈಷ್ಣವ, ಸೂಫಿ, ಬೌಧ್ಧ, ಸಿಖ್ ಎಲ್ಲಕ್ಕೂ ಎಡೆಯಿದೆ ಇಲ್ಲಿ. ಭರತಖಂಡ, ಪಾರ್ಸಿ ದೇಶ, ಅರಬೀ ದೇಶ, ಟಿಬೆಟ್ಟು- ಇಷ್ಟೊಂದು ಹರಹಿನ ವಸುಧಾವಲಯದ ಅತ್ಯುತ್ತಮ ಕಾವ್ಯಾಭಿವ್ಯಕ್ತಿಗಳ ವಿವಿಧ ವೈಭವಗಳಿಗೆ ಈ ಕೃತಿ ಖಜಾನೆಯಂತಿದೆ.
©2024 Book Brahma Private Limited.