ಸರಸ್ವತಿ ನಾಗರಿಕತೆ

Author : ಸಿ.ಜಿ. ರಾಘವೇಂದ್ರ ವೈಲಾಯ

Synopsys

ಸರಸ್ವತಿ ನಾಗರಿಕತೆ: ಪ್ರಾಚೀನ ಭಾರತೀಯ ಇತಿಹಾಸದ ಹೊಸಮಗ್ಗುಲು ಸಿ ಜಿ ರಾಘವೇಂದ್ರ ವೈಲಾಯ ಅವರ ಕೃತಿಯಾಗಿದೆ.ಹರಪ್ಪನ್ನರು ಎಂದರೆ ಯಾರು? ಇವರಿಗೂ, ಇಂದಿನ ತಲೆಮಾರಿನ ಭಾರತೀಯರಿಗೂ ಏನು ಸಂಬಂಧ ? ಆರ್ಯರ ಆಕ್ರಮಣ ನಡೆದದ್ದು ಸುಳ್ಳೇ? ಹಲವಾರು ಉಪಗ್ರಹ ಆಧಾರಿತ ಮಾಹಿತಿಗಳು, ಭೂಗರ್ಭ ವಿಜ್ಞಾನ ಶಾಸ್ತ್ರದ ತಥ್ಯಗಳು, ಪಾರಂಪರಿಕ ಪುರಾಣೇತಿಹಾಸದ ಸಾಕ್ಷ್ಯಗಳು, ಪುರಾತತ್ವ ಶಾಸ್ತ್ರಗಳೂ ಅಲ್ಲದೇ, ಹಲವಾರು ಆಧುನಿಕ ವೈಜ್ಞಾನಿಕ ಸಂಶೋಧನೆಗಳನ್ನು ಆಧರಿಸಿ, ಭಕ್ಷಿಯವರು ’ಸರಸ್ವತಿ ನಾಗರಿಕತೆ’ ಎಂಬ ಈ ಪುಸ್ತಕವನ್ನು ರಚಿಸಿದ್ದಾರೆ. ವಸಾಹತು ಚರಿತ್ರಕಾರರು ಕಡೆಗಣಿಸಿದ ಭಾರತದ ನೈಜ ಇತಿಹಾಸದ ಅನೇಕ ನೂತನ, ನಿಗೂಢ ಮತ್ತು ಉಪೇಕ್ಷಿತ ಆಯಾಮಗಳನ್ನು ಈ ಪುಸ್ತಕವು ಬಹಿರಂಗ ಪಡಿಸಿದೆ.

About the Author

ಸಿ.ಜಿ. ರಾಘವೇಂದ್ರ ವೈಲಾಯ

ಲೇಖಕ ಸಿ.ಜಿ. ರಾಘವೇಂದ್ರ ವೈಲಾಯ ಅವರು ವೃತ್ತಿಯಲ್ಲಿ ವೈದ್ಯರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಪ್ರಸ್ತುತ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ವೈದ್ಯಾಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಇವರ ಅಂಕಣಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ. ಕೃತಿಗಳು: ಸರಸ್ವತಿ ನಾಗರಿಕತೆ ...

READ MORE

Related Books