‘ಆಂಧ್ರರ ಸಾಮಾಜಿಕ ಇತಿಹಾಸ’ ತೆಲುಗು ಕೃತಿಯ ಕನ್ನಡಾನುವಾದ. ತೆಲುಗಿನ ಸುರವರಂ ಪ್ರತಾಪರೆಡ್ಡಿ ಅವರ ಕೃತಿಯನ್ನು ಡಾ.ಆರ್. ಶೇಷಶಾಸ್ತ್ರಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇತಿಹಾಸ ದಾಖಲಿಸುವಾಗ ಅದು ರಾಜರ ಚರಿತ್ರೆಯಾಗಿ ದಾಖಲಾಗುವುದೇ ಹೆಚ್ಚು ಆದರೆ ಅದಕ್ಕೂ ಮುಖ್ಯವಾದದ್ದು, ಆ ಕಾಲಘಟ್ಟದ ಸಾಮಾನ್ಯ ಜನರ ಜೀವನ. ಸಾಮಾಜಿಕ ಜೀವನ ಸಂಸ್ಕೃತಿ, ಕಲೆ, ವಿಜ್ಞಾನ, ವ್ಯಾಪಾರ ಮೊದಲಾದ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವುದು. ಈ ಕೃತಿ ಆ ಕಾರ್ಯವನ್ನು ಮಾಡಿದೆ. ಸುಮಾರು ಸಾವಿರವರ್ಷಗಳ ಕಾಲಘಟ್ಟದ ಸಾಮಾನ್ಯ ತೆಲುಗು ಭಾಷಿಕರ ಇತಿಹಾಸವನ್ನು ಆಂಧ್ರರ ಸಾಮಾಜಿಕ ಇತಿಹಾಸವನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.
©2024 Book Brahma Private Limited.