ಲಲಿತಕಲಾಶಾಸ್ತ್ರದ ಪೂರ್ವಪರಂಪರೆಯನ್ನು ಪರಿಚಯಿಸುವುದು ಅಗತ್ಯವಾದ ನೂತನ ಕಲಾಶಾಸ್ತ್ರ. ಈ ಶತಮಾನದ ನೂತನ ನಾಟ್ಯಶಾಸ್ತ್ರ ಹುಟ್ಟಿ ಬೆಳೆಯಬೇಕಾದರೆ ಭಾರತೀಯ ನಾಟ್ಯಶಾಸ್ತ್ರದ ಪರಂಪರೆ ಸ್ಪಷ್ಟ ತಿಳಿಯಬೇಕು. ಮುಖ್ಯವಾಗಿ, ಸಂಸ್ಕೃತದಲ್ಲಿರುವ ನಾಟ್ಯವಿಷಯಕ ಗ್ರಂಥಗಳೆಲ್ಲವೂ ಪ್ರಾದೇಶಿಕ ಭಾಷೆಗಳಲ್ಲಿ ಅನುವಾದವಾಗಬೇಕು. ಸಂಸ್ಕೃತದ ನಾಟ್ಯಶಾಸ್ತ್ರಗ್ರಂಥಗಳಲ್ಲಿ ಮುಖ್ಯ ಒಂದಾದ 'ದಶರೂಪಕ'ವನ್ನು ಅನುವಾದಿಸಿ ಪ್ರಕಟಿಸುವುದರಲ್ಲಿ ಮೇಲಿನ ಪ್ರಯೋಜನದ ದೃಷ್ಟಿಯೊಂದಿದೆ.
©2024 Book Brahma Private Limited.