ಖ್ಯಾತ ಸಾಹಿತಿ, ವಿಮರ್ಶಕ, ಚಿಂತಕರಾದ ಡಾ. ಯು. ಆರ್. ಅನಂತಮೂರ್ತಿಯವರು ಪ್ರಾಚೀನ ಚೈನಾ ಸಾಹಿತ್ಯದ ಮೇರು ಕೃತಿಯಾದ ಲಾವ್ ತ್ಸು ವಿರಚಿತ ’ ದಾವ್ ದ ಜಿಂಗ್’ ಕನ್ನಡಾನುವಾದ ಮತ್ತು ಆ ದರ್ಶನದ ಬಗೆಗೆ ಚಿಂತನೆ ನಡೆಸಿದ್ದಾರೆ.
ಲಾವ್-ತ್ಸು ಒಬ್ಬ ಅನಾಮಿಕನಾಗಿ ಉಳಿಯಲು ಬಯಸುವ ಋಷಿ. ವಿನೋದ, ಕುಶಲಿ, ಎಲ್ಲದರಲ್ಲೂ ಉಲ್ಲಾಸದಿಂದ ಇರುವುದು ಈತನ ಗುಣ. ಲಾವ್-ತ್ಸು ಎರಡು ಭಾಗಗಳ ಒಂದು ಪುಸ್ತಕ ರಚಿಸಿದ. ಈ ಗ್ರಂಥವೇ ’ದಾವ್ ದ ಜಿಂಗ್’. ಐತಿಹ್ಯದ ಪ್ರಕಾರ ಐದುಸಾವಿರ ಚಿತ್ರ ಭಾವಲಿಪಿಗಳದು.ಅವನು ಪುಸ್ತಕ ರಚಿಸಿದ ನಂತರ ಎಲ್ಲಿ ಹೋದ ಎಂಬುದು ತಿಳಿಯದ ಸಂಗತಿಯಾಗಿದೆ.
ಆಧುನಿಕ ರಾಜಕೀಯ ವ್ಯಕ್ತಿತ್ವಕ್ಕೂ ಅಗತ್ಯವಾಗಿ ಬೇಕಾದ ದರ್ಶನ ಮತ್ತು ಭಾವಸಮೂಹ ದಾವ್ ದ ಜಿಂಗ್. ಲಾವ್-ತ್ಸು ತನ್ನ ಸೂತ್ರಗಳನ್ನು ರಚಿಸಿದ್ದು ಚೀನೀ ಪ್ರಾಂತ್ಯಗಳು ಪರಸ್ಪರ ಬಡಿದಾಡುತ್ತಿದ್ದ ಕಾಲದಲ್ಲಿ. ಆದರೂ ಲಾವ್ ತ್ಸು ತನ್ನ ಕಾಲವನ್ನು ಸ್ಪಂದಿಸುತ್ತಲೇ ಮೀರಿನಿಂತವನು. ತನ್ನ ಕಾಲಕ್ಕೆ ಸಲ್ಲುವವನಾಗಿಯೂ ಚಿರವಾಗಿ ಉಳಿದ ಇಂಥ ಪುರಾತನ ಲಾವ್-ತ್ಸೆನನ್ನು ’ದಾವ್ ದ ಜಿಂಗ್’ ಅನುವಾದದಲ್ಲಿ ಕಾಣಬಹುದು.
©2024 Book Brahma Private Limited.