ನಮ್ಮ ಜಲ ಸಂಪನ್ಮೂಲಗಳು

Author : ಟಿ. ಆರ್. ಅನಂತರಾಮು

Pages 105

₹ 90.00




Year of Publication: 2015
Published by: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ
Address: ನೆಹರೂ ಭವನ, 5, ಇನ್ ಸ್ಟಿಟ್ಯೂಶನಲ್ ಏರಿಯಾ ಫೇಜ್-11, ವಂಸತ್ ಕುಂಜ್, ಹೊಸ ದೆಹಲಿ- 110070

Synopsys

‘ನಮ್ಮ ಜಲ ಸಂಪನ್ಮೂಲಗಳು ಡಾ.ರಾಮು ಅವರ ಕೃತಿಯನ್ನು ಟಿ.ಆರ್. ಅನಂತರಾಮು ಕನ್ನಡಕ್ಕೆ ಅನುವಾದಿಸಿದ್ದಾರೆ. ನಮ್ಮ ದೇಶದ ಜಲ ಸಂಪನ್ಮೂಲ ಮಳೆಯ ಪ್ರಮಾಣವನ್ನು ಆಧರಿಸಿದೆ. ಮಳೆಯ ಪ್ರಮಾಣ ಸಾಕಷ್ಟಿದ್ದರೂ ಅದು ಎಲ್ಲೆಡೆಗಳಲ್ಲೂ ಸಮನಾಗಿ ಬೀಳುವುದಿಲ್ಲ ಮತ್ತು ಸಕಾಲಿಕವಾಗಿಲ್ಲ. ಇದರಿಂದಾಗಿ ನೀರಿನ ನಿಯಂತ್ರಣ, ಶೇಖರಣೆ ಹಾಗೂ ವಿತರಣೆಗಳಿಗೆ ಬೃಹತ್ ಯೋಜನೆಗಳ ಅವಶ್ಯಕತೆ ಇದೆ. ಜಲ ಸಂಪನ್ಮೂಲಗಳ ಬಗ್ಗೆ ವಿವರಣೆ ನೀಡುವ ಈ ಪುಸ್ತಕ ಸಾಮಾನ್ಯ ಓದುಗರಿಗೆ ಈ ಸಮಸ್ಯೆ ಮತ್ತು ಅದರ ನಿವಾರಣೆಗಾಗಿ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ತಿಳುವಳಿಕೆ ನೀಡುತ್ತದೆ.

ಪುಸ್ತಕದ ಲೇಖಕ ಡಾ. ರಾಮ, ನಮ್ಮ ದೇಶಕ್ಕೆ ಸರಿ ಹೊಂದುವ ಅಂತರ್ಜಲ ಭಂಡಾರಗಳನ್ನು ಸೃಷ್ಟಿಸುವ ಬಗ್ಗೆ ಮೂಲ ಯೋಜನೆಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಾಸ್ಮಿಕ್ ಕಿರಣಗಳ ಪರಸ್ಪರ ಕ್ರಿಯೆ ಮತ್ತು ಭೂಮಿಯ ಕಾಲಶಾಸ್ತ ಅವರ ವಿಶೇಷ ಅಧ್ಯಯನವಾಗಿದೆ. ಪವನಶಾಸ್ತ್ರ, ಸಾಗರಶಾಸ್ತ್ರ ಮತ್ತು ಜಲಶಾಸ್ತ್ರಗಳಲ್ಲಿ ವಿಕಿರಣ ಕ್ರಿಯೆಯ ಕುರುಹುಗಳ ಆನ್ವಯಿಕ ಅಧ್ಯಯನವನ್ನು ಕೈಗೊಂಡಿದ್ದಾರೆ. 

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books