ತಮಿಳು ಕಾವ್ಯಮೀಮಾಂಸೆ- ತಮಿಳಿನ ಆಧುನಿಕ ಲೇಖಕರಲ್ಲಿ ಪ್ರಮುಖ ಚಿಂತಕ, ಕಾದಂಬರಿಕಾರರಾದ ಡಾ.ಕಾರ್ಲೋಸ್ ಅವರ ಕೃತಿಯನ್ನು ಕನ್ನಡಕ್ಕೆ ಎಸ್.ಸುಚಿತ್ರಲತಾ ಮತ್ತು ಮೀರಾ ಅವರು ಅನುವಾದಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕೃತ ಕೇಂದ್ರಿತ ಪರಂಪರೆಯ ಜೊತೆಗೆ ಸಮಾನಾಂತರವಾಗಿ, ಸ್ವತಂತ್ರ್ಯವಾಗಿ ಬೆಳೆದ ಇನ್ನೊಂದು ಸಾಂಸ್ಕೃತಿಕ ಪರಂಪರೆ ಎಂದರೆ ದ್ರಾವಿಡರದ್ದು. ಅದರ ಅತ್ಯಂತ ಮುಖ್ಯ ಪ್ರತಿನಿಧಿ ಎಂದರೆ ತಮಿಳು ಸಂಸ್ಕೃತಿ. ಸಂಸ್ಕೃತದ ಜೊತೆಗೆ ಬೆರೆತಿದ್ದೂ ಅದು ಬೇರೆಯಾಗಿಯೇ ಉಳಿದಿದೆ. ಕೆಲವು ದಶಕಗಳಿಂದ ದ್ರಾವಿಡ ಚಳುವಳಿಯ ಸಾಂಸ್ಕೃತಿಕ ರಾಜಕಾರಣದ ಕಾರಣಕ್ಕಾಗಿ , ತಮಿಳು ಸಂಸ್ಕೃತಿ ತನ್ನ ವಿಶಿಷ್ಟತೆಯನ್ನು ಅಪಾರ ಏಕಾಗ್ರತೆಯಿಂದ ಹಠಮಾರಿತನದಿಂದ ಸಾಧಿಸುತ್ತಾ ಬಂದಿದೆ. ತಮಿಳಿನ ವಿಶಿಷ್ಟತೆಯನ್ನು ಸಾಹಿತ್ಯ ಮೀಮಾಂಸೆಯ ಮಟ್ಟದಲ್ಲೂ ಕಾಣುವ ಪ್ರಯತ್ನದ ಫಲವೇ ಈ ಕೃತಿ. ತಮಿಳು ಸಂಸ್ಕೃತಿ ವಿಶಿಷ್ಟತೆಯನ್ನು ಅಗತ್ಯವಾದ ಸಹಾನುಭೂತಿ ಮತ್ತು ವಿಮರ್ಶಾ ವಿವೇಕದ ಮೂಲಕ ನೋಡಲಾಗಿದೆ.
ಸ್ತ್ರೀವಾದಿ ಚಿಂತಕಿ, ಲೇಖಕಿ, ಭರತನಾಟ್ಯ ವಿದ್ವತ್ ಎಲ್.ಜಿ.ಮೀರಾ ಕೊಡಗಿನವರು. ತಾಯಿ ಯು.ಕೆ ಚಿತ್ರಾವತಿ, ತಂದೆ ಎಲ್.ಜಿ.ಗುರುರಾಜ್ ಹುಟ್ಟಿದ್ದು 5-5-1971 ರಲ್ಲಿ. ಬಿ.ಎಸ್ಸಿ, ಎಂ.ಎ ಪದವಿ ಪಡೆದ ಇವರು ಪಿ.ಎಚ್ ಡಿಯನ್ನೂ ಪಡೆದವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಭರತನಾಟ್ಯವನ್ನು ಕಲಿಸುವುದು ಇವರ ಹವ್ಯಾಸವಾಗಿದೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ...
READ MORE