ಮೇ ಡೇ ಹುತಾತ್ಮರ ಮಹಾನ್ ಗಾಥೆ

Author : ಆರ್‌.ಕೆ. ಹುಡಗಿ (ರಾಹು)

Pages 278

₹ 200.00

Synopsys

`ಮೇ ಡೇ ಹುತಾತ್ಮರ ಮಹಾನ್ ಗಾಥೆ ‘ ಕೃತಿಯು ರಾಹು ಅವರ ಅನುವಾದಿತ ಕೃತಿಯಾಗಿದೆ. ಈ ಕೃತಿಯ ಮೂಲ ಲೇಖಕರು ವಿಲಿಯಂ ಆಂಡಲ್ ಮನ್. ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಇಂದು ಪ್ರಪಂಚದಾದ್ಯಂತ ಪ್ರಾಯಶಃ ಎಲ್ಲ ದೇಶಗಳಲ್ಲಿಯೂ ತಪ್ಪದೆ ಆಚರಿಸಲ್ಪಡುವ ದಿನವೆಂದರೆ ಮೇ. 1. ಇದು ಕಾರ್ಮಿಕರ ದಿನ. ಇದಕ್ಕೆ ತನ್ನದೇ ಆದ ದೀರ್ಘ ಚರಿತ್ರೆಯಿದೆ. ಆದರೆ, ಈ ಚರಿತ್ರೆಯ ಮಹತ್ವ ಅರಿಯದ ಅನೇಕರು ಆ ದಿನವನ್ನು ಕೇವಲ ಔಪಚಾರಿಕವಾಗಿ ಆಚರಿಸಿ ಕೈ ಬಿಡುವ ಪ್ರವೃತ್ತಿ ಇತ್ತೀಚೆಗೆ ಬಹು ವ್ಯಾಪಕವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಮೇ ದಿನದ ಮಹತ್ವವನ್ನು ವಿಸ್ತೃತವಾಗಿ ವಿವರಿಸುವ ಅನೇಕ ಗ್ರಂಥಗಳು ಇಂಗ್ಲಿಷ್ ಮತ್ತು ಇತರ ಯುರೋಪಿಯನ್ ಭಾಷೆಗಳಲ್ಲಿ ಇವೆ. ಆದರೆ ಕನ್ನಡದಲ್ಲಿ ಮಾತ್ರ ತೀರ ವಿರಳವೆಂದೇ ಹೆಳಬೇಕು. ಈ ಅಭಾವವನ್ನು ನೀಗುವ ದಾರಿಯಲ್ಲಿ ಒಂದು ಸಣ್ಣ ಪ್ರಯತ್ನ ಈ ಅನುವಾದಿತ ಕೃತಿಯಾಗಿದೆ.

About the Author

ಆರ್‌.ಕೆ. ಹುಡಗಿ (ರಾಹು)

ರಾಹು ಎಂತಲೇ ಪ್ರಸಿದ್ಧರಾಗಿರುವ ಆರ್.ಕೆ. ಹುಡಗಿ ಅವರು ಜನಿಸಿದ್ದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ. ಕಲಬುರ್ಗಿ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಇವರು ಕಲಬುರಗಿ ರಂಗಾಯಣದ ನಿದೇರ್ಶಕರಾಗಿದ್ದರು. ಸಮುದಾಯ ಸಂಘಟನೆಯ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಇವರು ಅನುವಾದಿಸಿರುವ ಕೃತಿಗಳೆಂದರೆ ಆರನೇ ಹೆಂಡತಿ ಆತ್ಮಕತೆ, ಧರೆಹೊತ್ತಿ ಉರಿದಾಗ, ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ, ಅಮ್ಮಿ, ಭಯೋತ್ಪಾಧಕ, ಜಾತಿ ವ್ಯವಸ್ಥೆ, ಸೆಕ್ಯುಲರ್ ವಾದ ಬುಡ ಬೇರು ಮುಂತಾದವು ​​​​​. ಇವರಿಗೆ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ, 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ...

READ MORE

Related Books