ಜೀವನವೆನ್ನುವ ಅದ್ಭುತ

Author : ಕೆ. ಪ್ರಭಾಕರನ್

Pages 268

₹ 250.00




Year of Publication: 2016
Published by: ಸೃಷ್ಟಿ ಪಬ್ಲಿಕೇಷನ್ಸ್
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ಡಾ. ವಿ. ಪಿ ಗಂಗಾಧರನ್ ಅಂತರ ರಾಷ್ಟ್ರ ಖ್ಯಾತಿಯ ಕ್ಯಾನ್ಸರ್ ಚಿಕಿತ್ಸಕ. ಇವರ ವೈದ್ಯಕೀಯ ಕ್ಷೇತ್ರದ ಅನುಭವ ಕಥನಗಳನ್ನು, ನೆನಪುಗಳನ್ನು ಬಿತ್ತರಿಸಲು ’ಜೀವನವೆನ್ನುವ ಅದ್ಭುತ’ ಕೃತಿ ರಚನೆಯಾಗಿದೆ. ಮಲಯಾಳಂ ಸಾಹಿತ್ಯದಲ್ಲಿ ಕೃಷಿ ಮಾಡಿರುವ ಕೆ. ಎಸ್. ಅನಿಯನ್ ಅವರು ಡಾ. ವಿ. ಪಿ ಗಂಗಾಧರನ್ ಅವರ ವಿವಿಧ ಅನುಭವಗಳನ್ನು ಕೃತಿಯ ಮೂಲಕ ಹಿಡಿದಿಟ್ಟು ಕೊಟ್ಟವರು. ಅವರ ಈ ಸಂಪಾದನೆಯನ್ನು ಕನ್ನಡೀಕರಿಸಿದವರು ಪ್ರಭಾಕರನ್ ಕೆ. 

ಈ ಪುಸ್ತಕದ ಹಲವಾರು ಅನುಭವ ಕಥನಗಳು ವೈದ್ಯಕೀಯ ಕ್ಷೇತ್ರದಲ್ಲಿನ ಕ್ಯಾನ್ಸರ್‍ ಚಿಕಿತ್ಸೆಗೆ ಸಂಬಂಧಿಸಿದ್ದೇ ಆಗಿದೆ. ವೈದ್ಯರ ಒಡನಾಟ, ರೋಗಿಗಳ ದೈನಂದಿನ ಬದುಕಿನ ಹೋರಾಟಗಳ ಚಿತ್ರಣ, ಚಿಕಿತ್ಸಕ ವಿಧಾನ, ಇವೆಲ್ಲವುಗಳ ಅನುಭವದ ಮಾತುಗಳನ್ನು ಕೃತಿಯಲ್ಲಿ ನೋಡಬಹುದು.

About the Author

ಕೆ. ಪ್ರಭಾಕರನ್
(26 April 1957)

ವೃತ್ತಿಯಿಂದ ಎಂಜಿನಿಯರ್‌ ಆಗಿರುವ ಕೆ. ಪ್ರಭಾಕರನ್‌ ಅವರು ಮೆಸ್ಕಾಮ್‌ (ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ)ದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದರು (2014ರ ವರೆಗೆ). ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಸದ್ಯ ಶಿವಮೊಗ್ಗ ನಿವಾಸಿ. ಸಾಹಿತ್ಸಯ ಮುದಾಯ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಮಲೆಯಾಳಂನಿಂದ ’ಕನಸನೂರಿನ ಕಿಟ್ಟಣ್ಣ’ ಕೃತಿಯನ್ನು ಕನ್ನಡೀಕರಿಸಿದ್ದಾರೆ. ...

READ MORE

Related Books