‘ಸಾವಿತ್ರಿಬಾಯಿ ಫುಲೆ ಮತ್ತು ನಾನು’ ಲೇಖಕಿ ಸಂಗೀತ ಮುಳೆ ಅವರ ಇಂಗ್ಲಿಷ್ ಕೃತಿಯ ಕನ್ನಡಾನುವಾದ. ಈ ಮಹತ್ವದ ಕೃತಿಯನ್ನು ಲೇಖಕ, ವಿಕಾಸ್ ಮೌರ್ಯ ಹಾಗೂ ಕೆಸ್ತಾರ ವಿ ಮೌರ್ಯ ಅವರು ಕನ್ನಡೀಕರಿಸಿದ್ದಾರೆ. ಕೃತಿಯ ಮೂಲ ಲೇಖಕಿ ಸಂಗೀತ ಮುಳೆ ಅವರು ಕೃತಿಯ ಕುರಿತು ಬರೆಯುತ್ತಾ ‘ಅಕ್ಷರಸ್ಥಳಾದ ಪ್ರತಿಯೊಬ್ಬ ಭಾರತೀಯ ಹೆಣ್ಣಿನ ಮೇಲೆ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆಯವರು ನೀಡಿದ ಅಕ್ಷರದ ಋಣವಿದೆ. ಬೆರಳೆಣಿಕೆಯಷ್ಟು ಭಾರತೀಯ ಮಹಿಳೆಯರು ಶಿಕ್ಷಣ ಪಡೆದಿದ್ದ ಸಮಯದಲ್ಲಿ ತಮ್ಮ ಪತ್ನಿಗೆ ಶಿಕ್ಷಣ ಹಾಗೂ ಬೆಂಬಲ ನೀಡಿದ ಜ್ಯೋತಿಬಾ ಫುಲೆ ಮತ್ತು ಎಲ್ಲಾ ಜಾತಿಯ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಲು ಶಾಲೆ ತೆರೆದ ಸಾವಿತ್ರಿಬಾಯಿ ಫುಲೆ, ಇವರಿಬ್ಬರ ಋಣ ತೀರಿಸುವ ಪ್ರಯತ್ನ ಈ ಪುಸ್ತಕವಾಗಿದೆ’ ಎಂದಿದ್ದಾರೆ. ಮೂಲ ಕೃತಿಗೆ ಯಾವುದೇ ಚ್ಯುತಿಯಾಗದಂತೆ ಅಷ್ಟೇ ಅರ್ಥಪೂರ್ಣವಾಗಿ ಕನ್ನಡೀಕರಿಸಿದ್ದಾರೆ ಲೇಖಕ ವಿಕಾಸ್ ಮೌರ್ಯ ಹಾಗೂ ಕೆಸ್ತಾರ ವಿ. ಮೌರ್ಯ.
©2024 Book Brahma Private Limited.