ಮಿಥಿಲೆಯನ್ನಾಳಿದ ಕರ್ನಾಟಕರು- ಪುಸ್ತಕವು ಕ್ರಿ.ಶ. 1097 ಮತ್ತು 1325ರ ಮಧ್ಯೆ ಕರ್ನಾಟಕರು ಆಳಿದ ಮಿಥಿಲೆಯ ರಾಜಕೀಯ, ಆಡಳಿತಾತ್ಮಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಪ್ರಮುಖ ಲಕ್ಷಣಗಳಿಗೆ ಪ್ರಾಶಸ್ತ್ಯ ನೀಡುತ್ತದೆ.
ಈ ಕಾಲಘಟ್ಟವು ಮಿಥಿಲೆಯ ಇತಿಹಾಸವನ್ನು ರೂಪಿಸಿತೆಂದು ಪರಿಗಣಿಸಲಾಗಿದೆ. ಏಕೆಂದರೆ, ತಮ್ಮ ಹಿಂದಿನ ಕಾಲಘಟ್ಟದ ಜನಕರಂತೆಯೆ ಕರ್ನಾಟರೂ ಮಿಥಿಲೆಯನ್ನು ಭಾರತದ, ವಿಶೇಷತಃ ಉತ್ತರ ಭಾರತದ ಭಿತ್ತಿಯ ಮೇಲೆ ತಂದವರು. ಇದು ಕರ್ನಾಟರನ್ನು ಕುರಿತು ಪ್ರತ್ಯೇಕವಾಗಿ ಬರೆದ ಮೊದಲ ಕೃತಿ.
ಮುಖ್ಯವಾಗಿ ಕ್ರಿ.ಶ. 1097ವರೆಗಿನ ಮಿಥಿಲಾ ಇತಿಹಾಸದ ಸಂಕ್ಷಿಪ್ತ ಅವಲೋಕನ, ಮಿಥಿಲೆಯ ಕರ್ನಾಟ ಮೂಲ, ನಾನ್ಯದೇವನ ಜೀವನ, ಸಾಧನೆ, ನಾನ್ಯದೇವನ ಉತ್ತರಾಧಿಕಾರಿಗಳು, ಮಿಥಿಲೆಯ ರಾಜಕೀಯ ಇತಿಹಾಸ, ಹರಿಸಿಂಹದೇವನ ಜೀವನ, ಸಾಧನೆಗಳು, ಕ್ರಿ.ಶ. 1325ರವರೆಗಿನ ಮಿಥಿಲೆಯಲ್ಲಿ ಮುಸ್ಲಿಮ ಪ್ರಭುತ್ವ ವಿಸ್ತರಣೆ, ಕರ್ನಾಟರ ಅವನತಿ ಕುರಿತು ವಿವರಿಸಿದ್ದಾರೆ. ಸಿ.ಪಿ.ಎನ್. ಸಿನ್ಹಾ ಅವರು ರಚಿಸಿದ ಈ ಕೃತಿಯನ್ನು ಸದಾನಂದ ಕನವಳ್ಳಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.