ಕರ್ನಾಟಕದಲ್ಲಿ ವಿವಿಧ ಚಾರಿತ್ರಿಕ ಕಾಲಘಟ್ಟಗಳಲ್ಲಿ ಬೇರೆ, ಬೇರೆ ಪಂಥ, ಸಂಪ್ರದಾಯಗಳು ಹುಟ್ಟಿ ನಾಡಿನ ಉದ್ದಗಲಕ್ಕೂ ವ್ಯಾಪಿಸಿರುವುದನ್ನು ಕಾಣುತ್ತೇವೆ. ಅವುಗಳಲ್ಲಿ ಮೈಲಾರ ಸಂಪ್ರದಾಯವೂ ಒಂದು. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಮೈಲಾರವು ಹಿರೇಮೈಲಾರ, ಮಣ್ಮೈಲಾರ, ಉಂಗುರಾಲಕ್ಷೇತ್ರ ಎಂಬ ಹೆಸರುಗಳಿಂದ ಗುರುತಿಸಿಕೊಂಡು ತನ್ನದೇ ಆದ ಸಾಂಸ್ಕೃತಿಕ ಮಹತ್ವ ಪಡೆದು ಕೊಂಡಿದೆ..
ಮೈಲಾರ ಸಂಪ್ರದಾಯ ಕುರಿತಂತೆ ವ್ಯಾಪಕವಾಗಿ ಸಂಶೋಧನಾತ್ಮಕ ಅಧ್ಯಯನಗಳಿವೆ. ಅಂದರೆ ಮಹಾರಾಷ್ಟ್ರದಲ್ಲಿ ಮೈಲಾರನು ಖಂಡೋಬಾ ಎಂಬ ಹೆಸರಿನಿಂದ ಪ್ರಸಿದ್ಧ ಹೊಂದಿದ್ದು, ಮರಾಠಿಗರ ಕುಲದೇವರಾಗಿದೆ. ಕರ್ನಾಟಕದಲ್ಲಿ ಮೈಲಾರ ದೇವರ ಕ್ಷೇತ್ರಗಳಾಗಿ ಹಿರೇಮೈಲಾರ ಮತ್ತು ದೇವರಗುಡ್ಡ ಕ್ಷೇತ್ರಗಳು ಪ್ರಮುಖವಾಗಿವೆ. ಇವುಗಳಲ್ಲಿ ಹಿರೇಮೈಲಾರ ಅಥವಾ ಮೈಲಾರವು ಪ್ರಮುಖ ಕೇಂದ್ರವೆಂಬ ಸಾಮಾನ್ಯ ಅಭಿಪ್ರಾಯವಿದೆ.
ವಿಜಯನಗರ ಕಾಲದ ಶಾಸನವೊಂದು ಮೈಲಾರ ಕ್ಷೇತ್ರವನ್ನು ಹಿರಿಯ ಮೈಲಾರ ಎಂದು ಕರೆದಿದೆ. ಈ ಕೃತಿಯಲ್ಲಿ ಮೈಲಾರ ಸಂಪ್ರದಾಯವನ್ನು ವಿವೇಚಿಸುವ ಜೊತೆಗೆ ವಿವಿಧೆಡೆ ಇರುವ ಮೈಲಾರದೇವರ ದೇವಾಲಯಗಳು, ಮೂರ್ತಿಶಿಲ್ಪಗಳು, ಆಚರಣೆಗಳು ಮೌಖಿಕ ಆಕರಗಳು ಹಾಗೂ ಶಾಸನಗಳನ್ನು ಸಂಗ್ರಹಿಸಿದ್ದು, ಅಧ್ಯಯನದ ಮಹತ್ವಪೂರ್ಣ ಕೃತಿ ಇದು.
©2024 Book Brahma Private Limited.