ಹಿಂದೂ ರೀತಿ ನೀತಿಗಳು ಪದ್ದತಿಗಳು ಮತ್ತು ಆಚರಣೆ ಕೃತಿಯ ಮೂಲ ಇಂಗ್ಲೀಷ್ ಆಗಿದೆ. ಈ ಕೃತಿಯನ್ನು ರುದ್ರಮೂರ್ತಿ ಶಾಸ್ತ್ರಿ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಪಾಚೀನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಪೂಜಾಕಾರ್ಯವನ್ನು ನೆರವೇರಿಸಿ ಅಥವಾ ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸಿ ತಮ್ಮ ದಿನನಿತ್ಯದ ಕಾರ್ಯಗಳನ್ನು ಆರಂಭಿಸುತ್ತಿದ್ದರು. ಈಗಿನ ಕಾಲದಲ್ಲಿ ಮನುಷ್ಯ ಭೌತಿಕ ಪ್ರಪಂಚದಲ್ಲಿ ಮುಳುಗಿಹೋಗಿರುವುದರಿಂದ ಆ ವ್ಯವಧಾನವಿಲ್ಲ. ಈಗಅವನು ಮನೆಯಲ್ಲೇ ಶಾಸ್ತ್ರ ಗ್ರಂಥಗಳ ಅಧ್ಯಯನ ಮತ್ತು ಪೂಜೆ ಸಲ್ಲಿಸಬಹುದು. ಸಮಯ ಸಿಕ್ಕಾಗ ದೇವಾಲಯಗಳಿಗೆ ಭೇಟಿ ಕೊಡಬಹುದು ಮತ್ತು ಧಾರ್ಮಿಕ ಪ್ರಚವನಗಳನ್ನು ಕೇಳಬಹುದು. ಈ ಪುಸ್ತಕದಲ್ಲಿ ಕೊಟ್ಟಿರುವ ಪದ್ಧತಿಗಳು ಮತ್ತು ಆಚರಣೆಗಳ ವಿವರಣೆ ಸಂಕ್ಷಿಪ್ತವಾಗಿದೆಯೇ ಹೊರತು ವಿಸ್ತ್ರತವಾಗಿಲ್ಲ. ಪ್ರತಿಯೊಂದನ್ನೂ ವಿವರವಾಗಿ ಚಿತ್ರಿಸಲು ಹೋದರೆ ಅದು ಆನೇಕ ಸಂಪುಟಗಳಾಗಬಹುದು. ಆದರೂ ಇಲ್ಲಿರುವ ವಿವರಗಳು ಓದುಗರಿಗೆ ಉಪಯುಕ್ತವಾಗಿದ್ದು ಅವನ ಜ್ಞಾನವಿಕಾಸಕ್ಕೆ ಸಹಾಯವಾಗಿದೆ ಎಂದು ಪುಸ್ತಕದ ಹಿನ್ನುಡಿಯಲ್ಲಿ ತಿಳಿಸಲಾಗಿದೆ.
©2024 Book Brahma Private Limited.