`ಹದಿನೆಂಟನೆಯ ಅಕ್ಷರೇಖೆ’ ಕೃತಿಯು ಅಶೋಕ ಮಿತ್ರನ್ ಅವರ ಮೂಲ ಕೃತಿಯಾಗಿದೆ. ಲೇಖಕ ಶೇಷನಾರಾಯಣ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುತ್ತಾರೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ದೋಸ್ತ್ ಆಜ್ ನೆಟ್ ಪ್ರಾಕ್ಟಿಸ್ ಹೈ, ಜರೂರ್ ಆ ಜಾನಾ' ಎಂದು ನಾಸಿರ್ ಆಲಿಖಾನ್ ಹೇಳಿ ಹೋದ. ಆ ವರ್ಷದ ಕಾಲೇಜ್ ಕ್ರಿಕೆಟ್ ಪಂದ್ಯಕ್ಕೆ ನಾಸಿರ್ ಅಲಿಖಾನ್ನನ್ನು ಕ್ಯಾಪ್ಟನ್ ಆಗಿ ನಿಯಮಿಸಿದ್ದರು. ನಾಸಿರ್ ಅಲಿಖಾನ್, ಮೊಯಿನುದೌಲಾ ಕಪ್ ಗೆದ್ದಿದ್ದ. ಹತ್ತನೆಯ ವ್ಯಕ್ತಿಯಾಗಿ ಬ್ಯಾಟ್ ಹಿಡಿಯಲು ಹೋದರೂ ಹತ್ತೇ ನಿಮಿಷಗಳಲ್ಲಿ ಮೂವತ್ತು ಮೂರು ರನ್ ತೆಗೆದಿದ್ದ. ನಾಲ್ಕು ನೂರು ವಿದ್ಯಾರ್ಥಿಗಳು ಓದುತ್ತಿದ್ದ ಆ ಕಾಲೇಜಿನಲ್ಲಿ, ನಲ್ವತ್ತು ವಿದ್ಯಾರ್ಥಿಗಳು ಮಾತ್ರ ಧೈರ್ಯವಾಗಿ ಕ್ರಿಕೆಟ್ ಆಡಲು ಬರುತ್ತಿದ್ದರು. ಆ ವರ್ಷ ಮಾತ್ರ ಅಲ್ಲ. ಇನ್ನೂ ಹಲವು ವರ್ಷಗಳವರೆಗೆ ಆತನೇ ಕ್ಯಾಪ್ಟನ್ ಆಗಿ ಇರುತ್ತಾನೆ ಎನ್ನುವುದರಲ್ಲಿ ಯಾರಿಗೂ ಸಂದೇಹವೇ ಇಲ್ಲ. ಸಂಜೆ ಆಟದ ಅಭ್ಯಾಸದಲ್ಲಿಯ ಸಹ ಸಿಲ್ಕ್ ಷರ್ಟ್, ಸೊಗಸಾದ ಪ್ಯಾಂಟಿನೊಂದಿಗೆ ಬರುತ್ತಿದ್ದ ನಾಸಿರ್ ಅಲಿಖಾನ್, ಇದಕ್ಕೆ ಮೊದಲು ಚಂದ್ರಶೇಖರನ ಆಟದ ಬಗ್ಗೆ ಏನೂ ತಿಳಿದುಕೊಳ್ಳಲು ಅವಕಾಶವಿರಲಿಲ್ಲ. ಆದರೂ, ಅವತ್ತು ಅವನನ್ನು ಕಾಲೇಜಿಗೆ ನೆಟ್ ಪ್ರಾಕ್ಸಿಸಿಗೆ ಬರ ಹೇಳಿದ್ದ, ಹೀಗೆ ಕಥೆಯು ಮುಂದುವರಿಯುತ್ತದೆ.
©2024 Book Brahma Private Limited.