ಜಾನಪದ ವಿದ್ವಾಂಸ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರ ಸಂಶೋಧನಾತ್ಮಕ ಲೇಖನಗಳ ಸಂಗ್ರಹ ಕೃತಿ-ದುರುಗಸೀಮೆ ಜಾನಪದ. ಚಿತ್ರದುರ್ಗ ಜಿಲ್ಲೆಯ ಕ್ಷೇತ್ರ ಕಾರ್ಯಧಾರಿತವಾದ ಈ ಕೃತಿಯಲ್ಲಿ ಒಟ್ಟು 60 ಲೇಖನಗಳು ಸಂಕಲನಗೊಂಡಿವೆ. ಚಿತ್ರದುರ್ಗ ಜಿಲ್ಲೆಯ ಕಾಡುಗೊಲ್ಲರ ಜಾನಪದ-ಸಂಪ್ರದಾಯ-ಕಟ್ಟೆಮನೆ, ಜಾನಪದ, ಕಲೆ, ಬುಡಕಟ್ಟು ಸಂಸ್ಕೃತಿ, ನಾಯಕ ಜನಾಂಗ, ಮ್ಯಾಸಬೇಡರು, ಎತ್ತಪ್ಪ-ಜುಂಜಪ್ಪ, ಕುಂಚಿಟಿಗ-ಒಕ್ಕಲಿಗ ಸಂಸ್ಕೃತಿ, ಕುರುಬ ಸಂಸ್ಕೃತಿ, ಜಾತ್ರೆ-ಉತ್ಸವ, ಜಾನಪದ ಮತ್ತು ಪ್ರವಾಸೋದ್ಯಮ- ಹೀಗೆ ಸಾಮುದಾಯಿಕ ಜಾನಪದೀಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನ ಲೇಖನಗಳು ಇಲ್ಲಿವೆ. ಜನಾಂಗ ಸಂಸ್ಕೃತಿ ಅಧ್ಯನ ಆಸಕ್ತ ವಿದ್ಯಾರ್ಥಿಗಳಿಗೆ ಬೋಧಕರಿಗೆ ಈ ಕೃತಿಯು ಉಪಯುಕ್ತವಾಗಿದೆ.
©2024 Book Brahma Private Limited.