‘ಧರ್ಮದ ಹೆಸರಿನಲ್ಲಿ’ (ಗುಜರಾತ್ - ಯಜ್ಞಪಶುಗಳಿಗಾಗಿ ಒಂದು ಹೋರಾಟ) ಸಾರಾ ಅಬೂಬಕ್ಕರ್ ಅವರ ಅನುವಾದಿತ ಕೃತಿಯಾಗಿದೆ. 1976ರ ತುರ್ತು ಪರಿಸ್ಥಿತಿಯ ಕರಾಳ ಕಾನೂನಿನ ಬಲದಿಂದ ಕೇರಳದ ಯಮಸ್ವರೂಪಿ ಪೊಲೀಸರು ರಾಜ ಎಂಬ ವಿದ್ಯಾರ್ಥಿಯನ್ನು ಬೇಟೆನಾಯಿಗಳಂತೆ ಬೆನ್ನಟ್ಟಿ ಹಿಡಿದು ಠಾಣೆಯಲ್ಲೇ ಅಧಿಕಾರ ಬಲದಿಂದ ಕೊಲೆ ಮಾಡಿದ ಪ್ರಕರಣ. ಇದು ದೇಶಾದ್ಯಂತ ಭಾರಿ ಕೋಲಾಹಲವೆಬ್ಬಿಸಿ ಸುದ್ದಿಯಾದ, ಸರಕಾರ - ಪೊಲೀಸ್‌ಪಡೆ ಶಾಮೀಲಾಗಿ ಗೈದ ಹೇಯ ಕೃತ್ಯ. ಮಗುವಿಗಾಗಿ ಹೇಬಿಯಸ್ ಕಾರ್ಪಸ್ ಅರ್ಜಿ ಹಿಡಿದು ರಾಜನ ತಂದೆ ಬಡಿಯದ ಬಾಗಿಲುಗಳಿಲ್ಲ - ಅವರಿಗೆ ಹಗಲೂರಾತ್ರಿಯೂ ಒಂದೇ ಆಗಿದ್ದಿತು. ಕಂದನನ್ನು ಶಾಶ್ವತವಾಗಿ ಕಳೆದುಕೊಂಡ ಪ್ರೊ|| ಈಚರ ವಾರಿಯರ್ ಕಣ್ಣೀರ ಹನಿಗಳಿಂದ ಬರೆದ, ಸತ್ಯವನ್ನು ದೇಶದ ಜನತೆಗೆ ತಿಳಿಸಿದ ಕಲ್ಲೂ ಕರಗುವಂಥ ಘಟನೆ. ಇನ್ನೊಂದು ಗುಜರಾತ್ ಸರಕಾರವೇ ನೇರ ಭಾಗಿಯಾಗಿದ್ದು, ನರೇಂದ್ರ ಮೋದಿಯ ಸಮ್ಮತಿಯಿಂದಲೇ 2002ರಲ್ಲಿ ನಡೆದ ನರಮೇಧದ ಕಥೆ. ಜರ್ಮನಿಯ ಹಿಟ್ಲರನೂ ನಾಚುವಂಥ ಕೋಮುಗಲಭೆಯ ಬರ್ಬರ ಹತ್ಯಾಕಾಂಡದ ಅಕ್ಷಮ್ಯ ಅಪರಾಧದ ಕಥೆಯು ಇಲ್ಲಿ ಸೇರಿಕೊಂಡಿದೆ.
(ಹೊಸತು, ಫೆಬ್ರವರಿ 2014, ಪುಸ್ತಕದ ಪರಿಚಯ)
ಬೆಚ್ಚಿಬೀಳಿಸುವ ಈ ಪುಸ್ತಕದಲ್ಲಿ ಎರಡು ಘಟನೆಗಳಿವೆ. ಒಂದು - 1976ರ ತುರ್ತು ಪರಿಸ್ಥಿತಿಯ ಕರಾಳ ಕಾನೂನಿನ ಬಲದಿಂದ ಕೇರಳದ ಯಮಸ್ವರೂಪಿ ಪೊಲೀಸರು ರಾಜ ಎಂಬ ವಿದ್ಯಾರ್ಥಿಯನ್ನು ಬೇಟೆನಾಯಿಗಳಂತೆ ಬೆನ್ನಟ್ಟಿ ಹಿಡಿದು ಠಾಣೆಯಲ್ಲೇ ಅಧಿಕಾರ ಬಲದಿಂದ ಕೊಲೆ ಮಾಡಿದ ಪ್ರಕರಣ. ಇದು ದೇಶಾದ್ಯಂತ ಭಾರಿ ಕೋಲಾಹಲವೆಬ್ಬಿಸಿ ಸುದ್ದಿಯಾದ, ಸರಕಾರ - ಪೊಲೀಸ್‌ಪಡೆ ಶಾಮೀಲಾಗಿ ಗೈದ ಹೇಯ ಕೃತ್ಯ. ಮಗುವಿಗಾಗಿ ಹೇಬಿಯಸ್ ಕಾರ್ಪಸ್ ಅರ್ಜಿ ಹಿಡಿದು ರಾಜನ ತಂದೆ ಬಡಿಯದ ಬಾಗಿಲುಗಳಿಲ್ಲ - ಅವರಿಗೆ ಹಗಲೂರಾತ್ರಿಯೂ ಒಂದೇ ಆಗಿದ್ದಿತು. ಕಂದನನ್ನು ಶಾಶ್ವತವಾಗಿ ಕಳೆದುಕೊಂಡ ಪ್ರೊ|| ಈಚರ ವಾರಿಯರ್ ಕಣ್ಣೀರ ಹನಿಗಳಿಂದ ಬರೆದ, ಸತ್ಯವನ್ನು ದೇಶದ ಜನತೆಗೆ ತಿಳಿಸಿದ ಕಲ್ಲೂ ಕರಗುವಂಥ ಘಟನೆ. ಇನ್ನೊಂದು ಗುಜರಾತ್ ಸರಕಾರವೇ ನೇರ ಭಾಗಿಯಾಗಿದ್ದು, ಮುಖ್ಯಮಂತ್ರಿ ನರೇಂದ್ರ ಮೋದಿಯ ಸಮ್ಮತಿಯಿಂದಲೇ ೨೦೦೨ರಲ್ಲಿ ನಡೆದ ನರಮೇಧದ ಕಥೆ. ಜರ್ಮನಿಯ ಹಿಟ್ಲರನೂ ನಾಚುವಂಥ ಕೋಮುಗಲಭೆಯ ಬರ್ಬರ ಹತ್ಯಾಕಾಂಡದ ಅಕ್ಷಮ್ಯ ಅಪರಾಧದ ಕಥೆ. ಅಂದಿನ ಗುಜರಾತ್ ಸರಕಾರದಲ್ಲಿ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿದ್ದು ಮೋದಿ ಕೃತ್ಯಗಳನ್ನೆಲ್ಲ ಬಯಲಿಗೆಳೆದು ಈ ಕೃತಿಯ ಮೂಲಕ ದಾಖಲೆ ನೀಡಿದವರು ಶ್ರೀ ಆರ್. ಬಿ. ಶ್ರೀಕುಮಾರ್. ಇವರು ಸರಕಾರದ ಕೆಂಗಣ್ಣಿಗೆ ಗುರಿಯಾದರೂ ಜನತೆಯ ವಿಶ್ವಾಸ ಗಳಿಸಿದವರು. ಇಂಥ ಮೋದಿ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿತವಾದ ಈ ದಿನಗಳಲ್ಲಿ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ. ಮೋದಿ ಆಡಳಿತ - ತುರ್ತು ಪರಿಸ್ಥಿತಿ ಎರಡೂ ಬೇಡ; ಶ್ರೀ ಕುಮಾರರಂಥ ದಕ್ಷ ಅಧಿಕಾರಿಗಳಿರಲಿ ! ಸಮರ್ಥ ಅನುವಾದ ಶ್ರೀಮತಿ ಸಾರಾ ಅಬೂಬಕ್ಕರ್ ಅವರದು.
©2024 Book Brahma Private Limited.