‘ಬಿಜಾಪುರ ಡೈರಿ’ ಯಶವಂತರಾವ್ ಚವ್ಹಾಣ್ ಅವರ ಮೂಲ ಕೃತಿಯಾಗಿದ್ದು, ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು ಸ್ತ್ರೀ ರೋಗ ತಜ್ಞೆಯ ದೃಷ್ಟಿಯಲ್ಲಿ ಛತ್ತೀಸ್ ಗಡದ ಅನುಭವವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಕೆಲವು ಸುಸ್ಥಿತಿಯಲ್ಲಿರುವವರು ಹೇಳುವದೇನೆಂದರೆ, “ಹಣ ಬೇಕಾದರೆ ಕೊಡುತ್ತೇವೆ. ಆದರೆ ರಕ್ತ ಕೊಡುವುದಿಲ್ಲ ನೀವೆ ರಕ್ತದ ವ್ಯವಸ್ಥೆ ಮಾಡಿ” ನಾನಾಗ ನೇರವಾಗಿ ಹೇಳಿ ಬಿಡುತ್ತೇನೆ. ‘ನೀವೆ ನಿಮ್ಮ ಬಂಧು-ಬಳಗದವರಿಗೆ ರಕ್ತ ಕೊಡಲು ಸಿದ್ಧರಿಲ್ಲರುವಾಗ ಹೊರಗಿನವರು ಅದು ಹೇಗೆ ಕೊಡ್ತಾರೆ ಹೇಳಿ’ ಅವರಿಗೆ ರಕ್ತವನ್ನು ಯಾರಿಂದಲೂ ಸಿದ್ಧಪಡಿಸಲು ಬರುವುದಿಲ್ಲ. ನಾವೇ ಅದನ್ನು ಕೊಡಬೇಕಾಗುತ್ತದೆ. ಅಂದಾಗಲೇ ಅದು ರೋಗಿಗೆ ಸಿಗುತ್ತದೆ ಎಂದೆಲ್ಲ ಮತ್ತೆ ಮತ್ತೆ ಹೇಳಬೇಕಾಗುತ್ತದೆ. ನನ್ನ ಬಳಿ ಗಂಭೀರ ರೋಗಿ ಎಡ್ಮಿಟ್ ಆದಾಗ, ತಕ್ಷಣ ರಕ್ತದ ಅಗತ್ಯವಿದ್ದಾಗ, ಸಿಕ್ಕ-ಸಿಕ್ಕವರ ಬಳಿಗೆ ಹೋಗಿ ರಕ್ತವನ್ನು ಬೇಡುತ್ತ ಅಲೆದಾಡುತ್ತೇನೆ. ಅವರು ಬೇಕಾದರೆ ನಮ್ಮ ಸ್ಟಾಫ್ದವರೇ ಆಗಿರಲಿ, ವಾಹನ ಚಾಲಕನೇ ಆಗಿರಲಿ, ವೈದ್ಯರೇ ಆಗಿರಲಿ ಅಥವಾ ಅನುಕೂಲಸ್ಥ ಕುಟುಂಬದ ರೋಗಿಯ ಗಂಡನೇ ಆಗಿರಲಿ, ಕೆಲವು ಸುಶಿಕ್ಷಿತ ಜನರು, ಸೈನಿಕರು ಆಸ್ಪತ್ರೆಯ ಉಚಿತ ಸೇವೆ ನೀಡಿದ ಬಗ್ಗೆ ಕೃತಜ್ಞತೆಯೆಂದು ರಕ್ತದಾನ ಮಾಡುತ್ತಾರೆ. ನಮ್ಮ ಎಲ್ಲ ವೈದ್ಯರು ನಿಯಮಿತವಾಗಿ ರಕ್ತದಾನ ಮಾಡುತ್ತಾರೆ. ಸ್ಟಾಫ್ನ ಎಲ್ಲರ ರಕ್ತದ ಗುಂಪು ನಮಗೆ ಗೊತ್ತಿದೆ. ಅಗತ್ಯ ಬಿದ್ದರೆ ರಕ್ತದಾನಕ್ಕಾಗಿ ಫೋನ್ ಮಾಡಿ ಕರೆಯುತ್ತೇವೆ. ವಿರಳ ರಕ್ತದ ಗುಂಪಿನವರ ಫೋನ್ ನಂಬರನ್ನು ನಮ್ಮ ನರ್ಸೆಸ್ಗಳು ಬರೆದಿಟ್ಟುಕೊಳ್ಳುತ್ತಾರೆ. ತುರ್ತು ಅಗತ್ಯವಿದ್ದಾಗ, ಗಂಭೀರ ಪರಿಸ್ಥಿತಿಯಿದ್ದಾಗ, ಎಲ್ಲೆಡೆ ಸುದ್ದಿ ಹರಡುತ್ತದೆ. ಬಳಿಕ ಸರಸರ ಫೋನ್ ಮಾಡಿ ರಕ್ತದಾನಿಗಳನ್ನು ಕರೆಯಿಸಿ ಕೇಳುತ್ತೇವೆ.
©2024 Book Brahma Private Limited.