ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ; ಇನ್ನಾದರೂ ನಿಲ್ಲಬಾರದೇಕೆ?

Author : ಎಂ.ಎಸ್.ವೆಂಕಟರಾಮಯ್ಯ

Pages 78

₹ 10.00




Year of Publication: 2010
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು

Synopsys

ಭಾರತವು ಹಿಂದಿನಿಂದಲೂ ಬಹುಭಾಷಾ ದೇಶವಾಗಿದ್ದರೂ, ಎಲ್ಲಾ ಭಾಷಿಕರಲ್ಲಿಯೂ ಭಾರತೀಯ ಏಕತೆಯ ರಕ್ತ ಹರಿಯುತ್ತಿದ್ದುದನ್ನು ನೆಹರೂ ಅವರು ಗುರುತಿಸಿದ್ದರು. ಭಾಷಾವಾರು ಪ್ರಾಂತ್ಯಗಳು ಅಸ್ಥಿರ ಅಡಿಪಾಯದ ಮೇಲೆ ನಿಂತಿವೆ, ಅವುಗಳಿಂದ ಭಾರತದ ಏಕತೆಗೆ ಭಂಗವಿದೆ ಎಂದು ಲೇಖಕ ವಿ.ಬಿ. ಕಾಮತ್ ಅವರು ವಿವರಿಸುತ್ತಾರೆ. ಭಾಷೆ ಆಧಾರದದ ಮೇಲೇ ಛಿದ್ರತೆ ನಿಲ್ಲಬಾರದೇಕೆ ಎನ್ನುವ ಲೇಖಕರು ಉದಾಹರಣೆ ಸಮೇತವಾಗಿ ವೈಷಮ್ಯಗಳು ನಿಲ್ಲಲು ಸಾಧ್ಯ ಎಂಬುದನ್ನು ವಿವರಿಸಿದ್ದಾರೆ. ಈ ಕೃತಿಯನ್ನು ಎಂ.ಎಸ್.ವೆಂಕಟರಾಮಯ್ಯರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

About the Author

ಎಂ.ಎಸ್.ವೆಂಕಟರಾಮಯ್ಯ
(07 June 1943)

ಎಂ.ಎಸ್.ವೆಂಕಟರಾಮಯ್ಯ  ಅವರು ಮೂಲತಃ ಮಂಡ್ಯದವರು. ದಿನಾಂಕ 7-6-1943 ರಂದು ಜನಿಸಿದ ಇವರು ಇಲೆಕ್ಟ್ರಾನಿಕ್ ಇಂಜಿನಿಯರ್ ಡಿಪ್ಲಮೊ ಪದವೀಧರರು.  ಸ್ವಾತಂತ್ರ್ಯ ಹೋರಾಟಗಾರರಾದ ದಿ. ಎಂ.ಟಿ. ಶ್ರೀಕಂಠಯ್ಯ ಹಾಗೂ ತಾಯಿ ಶ್ರೀಮತಿ ಸುಬ್ಬಮ್ಮ ದಂಪತಿಗಳ ಪುತ್ರ. ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷರಾಗಿ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿ ಡಿ.ಇ.ಇ. ಓದಿ ಬೆಂಗಳೂರಿನ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಸೇವೆಗೆ ಸೇರಿದರು. ೧೯೮೭ರಲ್ಲಿ ಸ್ವಯಂ ನಿವೃತ್ತಿ ಪಡೆದರು. ನಂತರವೂ ಚೆನ್ನೈ ಹಾಗೂ ಹಂಪಿಯ ವಿಶ್ವವಿದ್ಯಾಲಯಗಳಲ್ಲಿ ವಿದ್ಯುತ್ ಸಲಹೆಗಾರರಾಗಿ ಸೇವೆಸಲ್ಲಿಸಿದ್ದಾರೆ. ಪ್ರವೃತ್ತಿಯಿಂದ ಲೇಖಕರಾದ ಇವರ ಲೇಖನಗಳು ಪ್ರಜಾವಾಣಿ, ಡೆಕನ್ ಹೆರಾಲ್ಡ್, ಕನ್ನಡ ಪ್ರಭ, ವಿಜಯ ...

READ MORE

Related Books