About the Author

ಎಂ.ಎಸ್.ವೆಂಕಟರಾಮಯ್ಯ  ಅವರು ಮೂಲತಃ ಮಂಡ್ಯದವರು. ದಿನಾಂಕ 7-6-1943 ರಂದು ಜನಿಸಿದ ಇವರು ಇಲೆಕ್ಟ್ರಾನಿಕ್ ಇಂಜಿನಿಯರ್ ಡಿಪ್ಲಮೊ ಪದವೀಧರರು. 

ಸ್ವಾತಂತ್ರ್ಯ ಹೋರಾಟಗಾರರಾದ ದಿ. ಎಂ.ಟಿ. ಶ್ರೀಕಂಠಯ್ಯ ಹಾಗೂ ತಾಯಿ ಶ್ರೀಮತಿ ಸುಬ್ಬಮ್ಮ ದಂಪತಿಗಳ ಪುತ್ರ. ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷರಾಗಿ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿ ಡಿ.ಇ.ಇ. ಓದಿ ಬೆಂಗಳೂರಿನ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಸೇವೆಗೆ ಸೇರಿದರು. ೧೯೮೭ರಲ್ಲಿ ಸ್ವಯಂ ನಿವೃತ್ತಿ ಪಡೆದರು. ನಂತರವೂ ಚೆನ್ನೈ ಹಾಗೂ ಹಂಪಿಯ ವಿಶ್ವವಿದ್ಯಾಲಯಗಳಲ್ಲಿ ವಿದ್ಯುತ್ ಸಲಹೆಗಾರರಾಗಿ ಸೇವೆಸಲ್ಲಿಸಿದ್ದಾರೆ.

ಪ್ರವೃತ್ತಿಯಿಂದ ಲೇಖಕರಾದ ಇವರ ಲೇಖನಗಳು ಪ್ರಜಾವಾಣಿ, ಡೆಕನ್ ಹೆರಾಲ್ಡ್, ಕನ್ನಡ ಪ್ರಭ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಮೈಸೂರು ಮಿತ್ರ ಉದಯವಾಣಿ, ಹಾಯ್ ಕರ್ನಾಟಕ ಹಾಗೂ ಸಾದ್ದಿ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

ಇವರಿಗೆ ಕನ್ನಡ, ತುಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯವಿದೆ ಹಲವಾರು ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಇವರು ೧೯೯೮ ರಿಂದ ಬಿಜ್ಬಜ್ ಎಂಬ ಇಂಗ್ಲಿಷ್ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿದ್ದಾರೆ. ಈ ಪತ್ರಿಕೆಯ ವತಿಯಿಂದ 'ಫಸ್‌ ಸೆಂಚುರಿ' ಮುಂತಾದ ಏಳೆಂಟು ಆಂಗ್ಲ ಕವನ ಸಂಕಲನಗಳನ್ನು ಸಂಪಾದಿಸಿದ್ದಾರೆ. ಸಿರಿಗನ್ನಡ ವೇದಿಕೆಯಲ್ಲಿ ಹಲವಾರು ವಿಚಾರ ಸಂಕಿರಣಗಳನ್ನು ನಡೆಸಿದ್ದಾರೆ. ಕವಿಗೋಷ್ಠಿ, ವಿಮರ್ಶಾಸ್ಪರ್ಧೆಗಳನ್ನು ಏರ್ಪಡಿಸಿದ್ದಾರೆ. ಒಳ್ಳೆಯ ಉಪನ್ಯಾಸಕರು, ಮೈಸೂರು, ಮಂಗಳೂರು, ಬೆಂಗಳೂರು ಆಕಾಶವಾಣಿಗಳಲ್ಲಿ ಇವರ ಕವನ, ಚಿಂತನ, ಸಂದರ್ಶನಗಳು ಪ್ರಸಾರವಾಗಿದೆ. ಉದಯ ಟಿ.ವಿ.ಯಲ್ಲಿ ಪರಿಚಯ ಕಾರ್ಯಕ್ರಮ ಪ್ರಸಾರವಾಗಿದೆ.

ಎಂ.ಎಸ್.ವೆಂಕಟರಾಮಯ್ಯ

(07 Jun 1943)