‘ವ್ಯಾಸಪರ್ವ’ ಮಹಾಭಾರತದ ಹತ್ತು ಪ್ರಮುಖ ಪಾತ್ರಗಳ ಮೇಲೆ ಹೊಸಬೆಳಕು ಚೆಲ್ಲುವ ಕೃತಿ. ಮರಾಠಿಯಲ್ಲಿ ಶ್ರೀಮತಿ ದುರ್ಗಾ ಭಾಗವತ ಅವರ ಕೃತಿಯನ್ನು ಗೌರೀಶ ಕಾಯ್ಕಿಣಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ವ್ಯಾಸಪರ್ವ ಪ್ರಮತಿ ಮತ್ತು ಮರಾಠೀ ಕನ್ನಡ ಸ್ನೇಹವರ್ಧನ ಕೇಂದ್ರ-ಪುಣೆ-ಇವೆರಡರ ಗೆಳೆತನದ ಒಪ್ಪಿಗೆಯ ಅಪ್ಪುಗೆಯಾಗಿ ಹೊರಬರುತ್ತಿದೆ. ಈ ಕೇಂದ್ರದ ವಕ್ತಾರರು ಡಾ. ಶ್ರೀನಿವಾಸ ಹಾವನೂರರು. ಈ ಮಹನೀಯರು; ಮರಾಠಿ ಕನ್ನಡ ಎಂದೇನು, ತಮ್ಮ ಸನಿಹ ಸುಳಿಯುವ ಎಲ್ಲರಲ್ಲೂ ಗೆಳೆತನದ ಬೆಳೆ ತೆಗೆಯಬಲ್ಲ ಮೈತ್ರೀಪುರುಷರು. ಹಾವನೂರರ ಸಲಹೆ;ಸೂಚನೆ; ಎಲ್ಲ ಹಂತಗಳಲ್ಲೂ ಅನನ್ಯ ಸಹಕಾರಕ್ಕೆ ಕೃತಜ್ಞನೆಯನ್ನು ಅರ್ಪಿಸಿದ್ದಾರೆ ಪ್ರಮತಿ ಪ್ರಕಾಶನದ ಸುಬ್ರಹ್ಮಣ್ಯ. ಕೃತಿಯಲ್ಲಿ ವ್ಯಾಸಪರ್ವ: ಪ್ರಸ್ತಾವನೆ, ಪೂರ್ಣಪುರುಷ ಕೃಷ್ಣ, ಸಿಡಿದ ಒಗ್ಗರಣೆಯ ಸಾಸಿವೆ, ಕನಲಿದ ಕ್ಷಿತಿಜ, ವ್ಯಕ್ತಿರೇಖೆ ಕಳೆದುಕೊಂಡ ಮನುಷ್ಯ, ಏಕಾಕಿ, ಅಪ್ಸರಲೋಕದಿಂದ ವಾಸ್ತವದೆಡೆಗೆ, ಮುಕ್ತಪಥಿಕ, ಕಂಬನಿ ಆರಿದ ಮೇಲೆ, ಮಾನವರಲ್ಲಿ ಕರಗಿಹೋಗ ಮಾನವ, ಕಾಮಿನಿ, ಪರಿಶಿಷ್ಟ ಎಂಬ ಶೀರ್ಷಿಕೆಯಡಿಯಲ್ಲಿ ವಿವರಗಳು ಸಂಕಲನಗೊಂಡಿವೆ
©2024 Book Brahma Private Limited.