ವೈಜ್ಞಾನಿಕ ಮನೋಭಾವ

Author : ಪಿ. ವಿ. ನಾರಾಯಣ

Pages 227

₹ 135.00




Year of Publication: 2011
Published by: ವಸಂತ ಪ್ರಕಾಶನ
Address: # 360, 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011.
Phone: 080-40917099 / 7892106719

Synopsys

ವೈಜ್ಞಾನಿಕ ಮನೋಭಾವ ಬಟ್ರ್ರಂಡ್ ರಸೆಲ್ ರ ಮೂಲ ಕೃತಿಯಾಗಿದ್ದು ಪಿ.ವಿ.ನಾರಾಯಣ ಅವರ ಅನುವಾದಿತ ಕೃತಿಯಾಗಿದೆ. ಇಪ್ಪತ್ತನೆಯ ಶತಮಾನದ ಅಪೂರ್ವ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಬಟ್ರ್ರಂಡ್ ರಸೆಲ್ ಪ್ರಖರ ಬುದ್ಧಿಜೀವಿಯಾಗಿದ್ದವರು. ಗಣಿತಶಾಸ್ತ್ರದಲ್ಲಿ ಪರಿಣತಿಯನ್ನು ಪಡೆದ ಅವರು ನಂತರ ತತ್ವಶಾಸ್ತ್ರದ ಕಡೆ ಒಲವು ಬೆಳೆಸಿಕೊಂಡರು. ಜಗತ್ತಿನ ಸ್ಕೂಲ ಸೂಕ್ಷ್ಮಗಳ ಬಗ್ಗೆ ಗಣಿತಶಾಸ್ತ್ರದ ನಿಖರತೆಯಿಂದಲೇ ಆಲೋಚಿಸತೊಡಗಿದರು. ಎಲ್ಲ ಜ್ಞಾನಶಾಖೆಗಳಲ್ಲಿ ಆಸಕ್ತಿ ಮಾತ್ರವಲ್ಲದೆ, ಆಳವೂ ಹರವಾದುದೂ ಆದ ಓದಿನಿಂದ ಯಾವುದರ ಬಗ್ಗೆಯಾದರೂ ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿದ್ದರು, ವಿಮರ್ಶೆ ಮಾಡಬಲ್ಲವರಾಗಿದ್ದರು. ಅವರ ಕೃತಿಗಳ ವಸ್ತುವೈವಿಧ್ಯ, ಹರಿತವಾದ ನೋಟ, ಸೂಕ್ಷ್ಮ ವಿಶ್ಲೇಷಣೆಗಳು ಬೆರಗುಗೊಳಿಸುವಂತಹವು. ರಸೆಲ್ ಅವರದು ನಿಖರ ಅರ್ಥದಲ್ಲಿ ವೈಜ್ಞಾನಿಕ ಮನೋಭಾವ, ಸಕಾರಣವಲ್ಲದ ಯಾವುದನ್ನೂ ಒಪ್ಪಗೆ, ಎಲ್ಲವನ್ನೂ ಭಕ್ಷಿಸುವ ಅತ್ಯುತ್ತರವಾದುದನ್ನು ಅಳವಡಿಸಿಕೊಳ್ಳುವ ಪ್ರವೃತ್ತಿಯವರಾದ ಅವರು ಬರೆದಂತೆ ಬದುಕಿದವರು, ವಿಜ್ಞಾನ ತಂತ್ರಜ್ಞಾನಗಳ ಬಗ್ಗೆ ಅವರದು ಅಸೀಮ ಶ್ರದ್ಧೆ, ಅವುಗಳು ಮಾನವನ ಬದುಕನು, ಪ್ರಭಾವಿಸುವ ಪರಿಣಾಮಿಸುವ ಕುರಿತು ಸದಾ ಅವರ ಮನಸ್ಸು ಆಲೋಚನಾಮರವಾಗಿತ್ತು, ಈ ಕೃತಿಯನ್ನು ರಸಲ್ ಬರೆದದ್ದು ಎಂಬತ್ತು ವರ್ಷಗಳ ಹಿಂದೆ ಆ ಹೊತ್ತಿಗಾಗಲೇ ವಿಜ್ಞಾನದ ಹೆಜ್ಜೆ ದೃಢವಾಗಿತ್ತು, ಖಚಿತವಾಗಿತ್ತು. ಅದನ್ನು ಕರಗತಮಾಡಿಕೊಂಡು, ಮಾನವ ಪ್ರವೃತ್ತಿಗಳನ್ನು ಸೂಕ್ತ ವಾಗಿ ಅವಲೋಕಿಸಿ ಆ ಮುಂದಿನ ದಿನಗಳಲ್ಲಿ ವಿಜ್ಞಾನವು ಮಾಡಬಹುದಾದ ಪಲ್ಲಟಗಳ ಕುರಿತು ಆಲೋಚಿಸಿ ರಚಿಸಿದ ಕೃತಿಯ ವೈಜ್ಞಾನಿಕ ಮನೋಧಾವ', ಮೂರು ಭಾಗಗಳಲ್ಲಿ ಹರಿಯುವ ಅವರ ಆಲೋಚನಾ ವಾಹಿನಿಯು ವಿಜ್ಞಾನ ತಂತ್ರಜ್ಞಾನಗಳನ್ನು ಮಾನವ ಮುಂದೆ ಬಳಸಿಕೊಳ್ಳಬಹುದಾದ ಬಗೆಯನ್ನು ಮುನ್ನುಡಿಯುತ್ತದೆ. ಅವರ ಭವಿಷ್ಯದರ್ಶನವು ಅದೆಷ್ಟು ನಿಖರವಾಗಿದೆಯೆಂಬುದು, ಈ ಎಂಬತ್ತು ವರ್ಷಗಳಲ್ಲಿ ಜಗತ್ತಿನಲ್ಲಿ ಆಗಿರುವ ಬದಲಾವಣೆಗಳೇ ಸೂಚಿಸುತ್ತವೆ. ಬದುಕನ್ನು ಹಾಗೂ ವಿಶ್ವವನ್ನು ಪ್ರೀತಿಯಿಂದ ವಿಶ್ಲೇಷಿಸುತ್ತ ಮತ್ತು ಅದರಲ್ಲಿಯೇ ಆನಂದವನ್ನು ಹೊಂದುವ ಮನೋಭಾವದಿಂದ ಸತ್ಯದೆಡೆಗೆ ಸಾಗದೆ, ವಿಜ್ಞಾನವನ್ನು ಕೇವಲ ಅಧಿಕಾರ ಸಾಧನವನ್ನಾಗಿ ಮಾಡಿಕೊಂದರೆ ಆಗುವ ಅನಾಹುತಗಳ ಭೀಕರ ಚಿತ್ರವನ್ನೂ, ರಸೆಲ್ ಪುಸ್ತಕದ ಮೂರನೆಯ ಭಾಗದಲ್ಲಿ ಕಟ್ಟಿಕೊಡುತ್ತಾರೆ, ಕೊನೆಯ ಅಧ್ಯಾಯದಲ್ಲಿಯಂತೂ ಅಸೀಮ ಜೀವನಪರತ ಮತ್ತು ಆರ್ದತೆಗಳು ಬರವಣಿಗೆಯ ಶೈಲಿಯನ್ನು ಹೃದಯ ತುಂಬುವು ಅವ್ಯಮಯ ಈ ಕೃತಿ ಮೊದಲು ಕಾಣಿಸಿಕೊಂಡು ಈತ ಎಂಬತ್ತು ವರ್ಷಗಳಾಗಿರಬಹುದು, ಆದರೆ ಅದರ ಶಾಶ್ವತ ಮತ್ತು ಮಾನವೀಯತೆಗಳು ಇಂದಿಗೂ ಪ್ರಸ್ತುತವಾಗಿದೆ, ಅವರ ಎಚ್ಚರಿಕೆಯು ಇಂದಿಗೂ ಸಲ್ಲುತ್ತದೆ ಎಂಬ ಕಾರಣದಿಂದ ಈ ಕೃತಿಯನ್ನು ಕನ್ನಡದಲ್ಲಿ ತಂದಿದ್ದೇನೆ.ಎಂದು ಪಿ.ವಿ ನಾರಾಯಣ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಪಿ. ವಿ. ನಾರಾಯಣ
(18 December 1942)

ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು.  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ  ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...

READ MORE

Related Books