`ಶ್ರೀ ಕೃಷ್ಣಾರ್ಪಣ ’ಗುರುರಾಜ ಪೋಶೆಟ್ಟಿಹಳ್ಳಿ ಅವರ ಕೃತಿಯಾಗಿದೆ. ಪರಂಪರೆಯ ಪ್ರವಕ್ತಾರ ಗುರುರಾಜ ಪೋಶೆಟ್ಟಿಹಳ್ಳಿರವರಿಂದ ಅಂದದಲ್ಲಿ ಸಂಕಲನಗೊಂಡಿದೆ. " ನಾರಾಯಣ -ಅವತಾರ ಚಿಂತನ"," ವಾಸುದೇವ -ಸ್ತೋತ್ರ ಮಂಥನ"," ಸಂಕರ್ಷಣ -ಅನುಷ್ಠಾನ ದರ್ಪಣ"," ಪ್ರದ್ಯುಮ್ನ -ಗುರು ನಮನ"," ಅನಿರುದ್ಧ -ಕ್ಷೇತ್ರ ದರ್ಶನ" ಎಂಬ ಐದು ಅಧ್ಯಾಯಗಳಲ್ಲಿನ 41ಲೇಖನಗಳಲ್ಲಿ ಜ್ಞಾನಮೂರ್ತಿ ಹಯಗ್ರೀವ, ಭವರೋಗ ವೈದ್ಯ- ಧನ್ವಂತರಿ, ಶ್ರೀರಾಮ, ಶ್ರೀಕೃಷ್ಣ, ತಿರುಪತಿ ತಿಮ್ಮಪ್ಪ, ಶ್ರೀಮಹಾಲಕ್ಷ್ಮಿ, ಶ್ರೀತುಲಸಿ,ಶಂಖ, ಸಾಲಿಗ್ರಾಮ, ಗೌರೀಶ, ಗರುಡ, ಗಣಪತಿ, ನವಗ್ರಹ ವಿಷ್ಣುಸಹಸ್ರನಾಮ, ಭಗವದ್ಗೀತೆ, ಗಜೇಂದ್ರಮೋಕ್ಷ, ಆದಿಶಂಕರಾಚಾರ್ಯ, ರಾಮಾನುಜಾಚಾರ್ಯ, ಆಚಾರ್ಯಶ್ರೀ ಮಧ್ವ, ಶ್ರೀಪಾದರಾಜ, ಶ್ರೀವ್ಯಾಸರಾಜ, ಪುರಂದರ- ಕನಕದಾಸರು, ಶ್ರೀಕಾಕೋಳು ಕ್ಷೇತ್ರ. ಹೀಗೆ ಭಗವಂತ, ಭಗವದ್ಭಕ್ತರು ಹಾಗೂ ಭಗವದ್ ಕ್ಷೇತ್ರಗಳನ್ನು ಪರಿಚಯಿಸಿದೆ. ಈ ಕೃತಿಯ ಓದುವಿಕೆಯಿಂದ ಪರಮಾತ್ಮ ಸಾನ್ನಿಧ್ಯ ಸುಖ ನಿಶ್ಚಿತವಾಗಿ ಸಿಗುತ್ತದೆ.
©2024 Book Brahma Private Limited.