‘ಸೋಮದೇವ ಮಹಾಕವಿಯ ಕಥಾಸರಿತ್ಸಾಗರ’ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡಕ್ಕೆ ಅನುವಾದಗೊಳಿಸಿದ್ದು, ಇದೊಂದು ಚರಿತ್ರೆಯನ್ನ ಒಳಗೊಂಡ ಕೃತಿಯಾಗಿದೆ. ಸುಮಾರು 2500 ವರುಷಗಳ ಹಿಂದೆ, ಗೌತಮಬುದ್ಧನ ಕಾಲದಲ್ಲಿ ಗುಣಾಡ್ಯ ಎನ್ನುವ ಕವಿಯು ಬೃಹತ್ ಕಥಾ ಎನ್ನುವ ಕಥೆಗಳ ಪುಸ್ತಕವನ್ನು ರಚಿಸಿದನು. ಆ ಕಾಲದಲ್ಲಿ ಉಪಯೋಗದಲ್ಲಿದ್ದ ಭಾಷೆಯ ಹೆಸರು ಪೈಶಾಚಿ. ಅದೇನೂ ಅಂತಹ ಉತ್ತಮ ಭಾಷೆಯಲ್ಲ, ಹಾಗೂ ಪಂಡಿತರುಗಳು ಉಪಯೋಗಿಸುವ ಭಾಷೆಯಲ್ಲ. ಆ ಬೃಹತ್‌ಕಥಾ ಪುಸ್ತಕ ಪೂರ್ಣವಾಗಿ ಕಳೆದುಹೋಗಿದೆ. ಅದರ ವಿಷಯವೊಂದೇ ಉಳಿದಿದೆ. ಆದರೆ, ಒಳ್ಳೆಯ ವಾರ್ತೆ ಏನೆಂದರೆ ಆ ಮಹಾಗ್ರಂಥದ ಕೆಲವು ಭಾಗಗಳು ಉಳಿದುಕೊಂಡಿವೆ. ಸಂಶೋಧನೆಯ ಪ್ರಕಾರ ಮೂರು ಭಾಗಗಳು, ಒಂದನೆ ಭಾಗ ಬೃಹತ್ ಕಥಾಮಂಜರಿ, ಎರಡನೆ ಭಾಗ ಬೃಹತ್ ಕಥಾ ಶ್ಲೋಕಸಂಗ್ರಹ, ಸಂಸ್ಕೃತದ ವಿದ್ಯಾವಂತರ ಪ್ರಕಾರ ಗುಣಾಡ್ಯನನ್ನು ಮಹಾಭಾರತವನ್ನು ಸೃಷ್ಟಿಸಿದ ವ್ಯಾಸ ಮಹರ್ಷಿಗೂ, ರಾಮಾಯಣ ಕಾವ್ಯವನ್ನು ಸೃಷ್ಟಿಸಿದ ವಾಲ್ಮೀಕಿ ಮಹರ್ಷಿಗೂ ಹೋಲಿಸಬಹುದು- ವ್ಯಾಸ ಮತ್ತು ವಾಲ್ಮೀಕಿ ಮಹರ್ಷಿಗಳು ಸಂಸ್ಕೃತದಲ್ಲಿ ಕಾವ್ಯವನ್ನು ರಚಿಸಿದರು. ಗುಣಾಡ್ಯನ ಭಾಷೆ ಅಷ್ಟು ಉತ್ತಮವಾಗಿರಲಿಲ್ಲ. ಗುಣಾಢನಿಂದ ರಚಿಸಲ್ಪಟ್ಟ ಕಾವ್ಯಗಳು ಭಕ್ತಕಥಾಮಂಜರಿ ಮತ್ತು ಸೋಮದೇವನಿಂದ ರಚಿತವಾದ ಕಥಾಸರಿತ್ಸಾಗರವನ್ನು ನಾವಿಲ್ಲಿ ಕಾಣಬಹುದಾಗಿದೆ.
©2024 Book Brahma Private Limited.