ʻಶಿವಾಜಿʼ ಕೃತಿಯು ಮರಾಠರ ಚಾರಿತ್ರಿಕ ನಾಯಕ ಛತ್ರಪತಿ ಶಿವಾಜಿಯ ಜೀವನವನ್ನು ಕುರಿತ ಅಧ್ಯಯನವಾಗಿದೆ. ಸೇತುಮಾಧವ ಎಸ್.ಪಗಡಿ ಅವರು ಆಂಗ್ಲಭಾಷೆಯಲ್ಲಿ ಬರೆದ ಕೃತಿಯನ್ನು ಲೇಖಕ ನಾ. ದಿವಾಕರ ಅವರು ಕನ್ನಡಕ್ಕೆ ತಂದಿದ್ಧಾರೆ. ಪುಸ್ತಕದಲ್ಲಿ ಮರಾಠ ಸಾಮ್ರಾಜ್ಯದ ಆಳ್ವಿಕೆ- ವಿಸ್ತರಣೆ, ಶಿವಾಜಿಯ ಜನನ, ಉಗಮ, ಏಳಿಗೆಯ ಮಹತ್ತರ ಕೊಡುಗೆಯನ್ನು ಹೇಳಲಾಗಿದೆ. ಜೊತೆಗೆ, ಮೊಘಲರ ವಿರುದ್ಧ ನಡೆದ ಹೋರಾಟದಲ್ಲಿ ಇವರ ನಾಯಕತ್ವ, ಪ್ರಾಮಾಣಿಕತೆ ಮತ್ತು ಸಹಿಷ್ಣತೆಯಿಂದ ಕೂಡಿದ ಒಂದು ಪ್ರಭುತ್ವದ ಸ್ಥಾಪನೆ ಮತ್ತು ಆಡಳಿತದ ಚಿತ್ರಗಳನ್ನೂ ಈ ಕೃತಿಯಲ್ಲಿ ಲೇಖಕರು ಚರ್ಚಿಸಿದ್ದಾರೆ.
©2024 Book Brahma Private Limited.