ಶಿವಾಜಿ ಸ್ವಸಾಮರ್ಥ್ಯದಿಂದ ವಿಶಾಲ ಪ್ರದೇಶವನ್ನು ಗೆದ್ದರೂ ಅಧಿಕೃತವಾಗಿ ಮಹಾರಾಜನೆನ್ನಿಸಿಕೊಂಡು ಸಿಂಹಾಸನವನ್ನೇರಲು ಅವನ ಹುಟ್ಟು ಅಡ್ಡಿ ಬಂದಾಗ, ರಾಜಾಸ್ಥಾನದ ಸಿಸೋದಿಯ ಎಂಬ ಕ್ಷತ್ರಿಯ ವಂಶದ ಜೊತೆಗೆ ಅವನ ವಂಶವನ್ನು ಸಮ್ಮಿಲನಗೊಳಿಸಿ ಒಂದು ಕೃತಕ ವಂಶವೃಕ್ಷವನ್ನು ಸೃಷ್ಟಿಸುವುದರ ಮೂಲಕ ಅವನಿಗೆ ಕ್ಷತ್ರಿಯತ್ವವನ್ನು ಪುರೋಹಿತರು ಕಲ್ಪಿಸಿದ್ದೇ ಅವನ ಮೂಲವನ್ನು ತಪ್ಪಾಗಿ ಗುರುತಿಸಲು ನಿಮಿತ್ತವಾಯಿತು.
ಡಾ. ಢೇರೆ ಹೀಗೆ ಪರಂಪರೆ ಒಪ್ಪಿದ್ದ ರಾಜಸ್ಥಾನದ ಸಿಸೋದಿಯ ಮೂಲವನ್ನು ನಿರಾಕರಿಸಿ ಅವನನ್ನು ಮೂಲತಃ ಕರ್ನಾಟಕದ ಗವಳಿ(ಗೌಳಿ) ಜನಾಂಗದವನೆಂದು ಸ್ಥಾಪಿಸಲು ಬಹು ಧೈರ್ಯವನ್ನು ತೋರಿದ್ದಾರೆ; ಗೆದ್ದಿದ್ದಾರೆ.
ಲೇಖಕ ಸರಜೂ ಕಾಟ್ಕರ್ ಈ ಕೃತಿಯ ಮೂಲವಾದ ಮರಾಠಿ ಕೃತಿಯ ಸಾರವನ್ನು ಬಹು ಸಮರ್ಥವಾಗಿ ಆಕರ್ಷಕ ಶೈಲಿಯಲ್ಲಿ ಹಿಡಿದಿಟ್ಟಿದ್ದಾರೆ. ವಾಸ್ತವತೆ, ಪರಂಪರೆ ಹಾಗೂ ಸಂಶೋಧನೆಯ ನೆಲೆಗಟ್ಟಿನ ಮೇಲೆ ಅವರು ಈ ಕೃತಿಯನ್ನು ರಚಿಸಿದ್ದಾರೆ. ಈವರೆಗೂ ಕೃತಿಯು ಐದು ಬಾರಿ ಮುದ್ರಣಗಳನ್ನು ಕಂಡಿದೆ.
©2024 Book Brahma Private Limited.