ಸೀತೆಯ ಅಡುಗೆ ಮನೆ ರಾಮಚಂದ್ರ ಗಾಂಧಿ ಅವರು ಬರೆದಿರುವ ಮೂಲ ಕೃತಿಯಾಗಿದ್ದು, ಜಿ.ರಾಜಶೇಖರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ರಾಮಜನ್ಮಭೂಮಿ ಚಳವಾಯು ಪ್ರತಿನಿಧಿಸುತ್ತಿದ್ದ ರಾಜಕಾರಣ ಮತ್ತು ಅದು ಸೃಷ್ಟಿಸಿದ ಸಾಮಾಜಿಕ ಪಲ್ಲಟಗಳು ರಾಮಚಂದ್ರ ಗಾಂಧಿಯವರನ್ನು ತೀವ್ರವಾಗಿ ಕಲಕಿದ್ದವು. ಆ ಒತ್ತಡದಲ್ಲೇ ಅಯೋಧ್ಯೆಗೆ ಹೋಗುವ ಅವರಿಗೆ, 'ಜನ್ಮಭೂಮಿಯ ಆವರಣದಲ್ಲೇ ಇರುವ, ಆದರೆ, ಮಾಧ್ಯಮ ವರದಿಗಳಲ್ಲಿ ಯಾವತ್ತೂ ಮಹತ್ವ ಪಡೆಯದ 'ಸೀತಾ 6. ರಸೋಯಿ', ಕಾಣಿಸುತ್ತದೆ. ರಮಣ ಪ್ರಣೀತ ಅದೈತದ ಬೆಳಕಿನಲ್ಲಿ ಸೀತೆಯ ಅಡುಗೆಮನೆ" ರಾಮಚಂದ ಗಾಂಧಿಯವರಿಗೆ ಕಳೆದುಹೋದ ಪುರಾಣವನ್ನು ಮತ್ತೆ ಪಡೆಯುವ ಭರವಸೆಯನ್ನು ಹುಟ್ಟಿಸುತ್ತದೆ. ಇದರಿಂದ ರೂಪುಗೊಂಡದ್ದೆ Sita's Kitchen: A testimony of faith and inquiry " ಇಲ್ಲ 'ಸೀತೆಯ ಅಡುಗೆಮನೆ' ಎಂಬುದು ಬಹುದೊಡ್ಡ ರೂಪಕ, ಶ್ರದ್ಧೆಯನ್ನು ಸತತ ಶೋಧನೆಯ ನಿಕಷಕ್ಕೊಡ್ಡಿ ಮತ್ತೆ ಮತ್ತೆ ಖಾತರಿಪಡಿಸಿಕೊಳ್ಳುವ ಚಲನಶೀಲತೆಯ ಪ್ರತೀಕ ಎಂದು ಎನ್.ಎ. ಎಂ ಇಸ್ಮಯಿಲ್ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.