ಖ್ಯಾತ ವಿದ್ವಾಂಸ ಶತಾವಧಾನಿ ಡಾ. ಆರ್. ಗಣೇಶ ಅವರ ಕೃತಿ-ಸಾಮಾನ್ಯ ಧರ್ಮ. ವ್ಯವಸ್ಥೆಯಲ್ಲಿ ಒಬ್ಬ ಸಾಮಾನ್ಯ ಪ್ರಜೆಯು ಅನುಸರಿಸಲೇ ಬೇಕಾದ ನೀತಿ-ನಿಯಮಗಳ ಕುರಿತು ವಿಸ್ತೃತವಾದ ಮಾಹಿತಿಯನ್ನು ಒಳಗೊಂಡ ಕೃತಿ ಇದು. ಧರ್ಮ ಎಂದರೆ ನಡವಳಿಕೆ. ಅದು ಜಾತಿ-ಧರ್ಮದ ಎಲ್ಲ ಕಟ್ಟುಗಳನ್ನು ಮೀರಿದ್ದು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಇಂತಹ ನಿಯಮಗಳು ಅಗತ್ಯ ಹಾಗೂ ಅನಿವಾರ್ಯ ಎಂಬರ್ಥದಲ್ಲಿ ‘ಸಾಮಾನ್ಯ ಧರ್ಮ’ ಎಂಬ ಪರಿಕಲ್ಪನೆಯಲ್ಲಿ ವಿಷಯವನ್ನು ಸಾದರಪಡಿಸಿದ್ದು, ಭಾರತೀಯ ಪ್ರಾಚೀನ ಪರಂಪರೆಯಲ್ಲಿ ಸಾಮಾನ್ಯ ಧರ್ಮದ ಹಿರಿಮೆಯನ್ನೂ ಸಹ ಚರ್ಚಿಸಲಾಗಿದೆ.
©2024 Book Brahma Private Limited.