ಋಗ್ವೇದ ಸಂಹಿತಾ ಭಾಗ-2

Author : ಎಚ್.ಪಿ. ವೆಂಕಟರಾವ್ ಶರಣ್ಮಾ

Pages 808

₹ 215.00




Year of Publication: 2009
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002

Synopsys

ಋಗ್ವೇದ ಸಂಹಿತಾ ಭಾಗ-2 ಕೃತಿಯು ಹೆಚ್. ಪಿ ವೆಂಕಟರಾವ್ ಶರಣ್ಮಾ ಅವರ ಅನುವಾದಿತ ಕೃತಿಯಾಗಿದೆ. ಪರಮೇಶ್ವರನ ನಿಃಶ್ವಾಸರೂಪವಾದ ನಾಲ್ಕು ವೇದಗಳಲ್ಲಿ ಮೊದಲನೆಯದಾದ ಋಗ್ವೇದವನ್ನು ಸಾಯಣಭಾಷ್ಯಸಹಿತವಾಗಿಯೂ, ಕನ್ನಡ ಭಾಷಾನುವಾದ ವಿವರಣೆಗಳಿಂದಲೂ ಮತ್ತು ಅನೇಕ ಉಪಕ್ತಾಂಶಗಳಿಂದಲೂ ಸಹಿತವಾಗಿ ಈ ಕೃತಿ ಹೊರಬಂದಿದೆ. ಮೊದಲನೇಯ ಹಾಗೂ ಎರಡನೇಯ ಭಾಗಗಳಿಂದ ಋಗ್ವೇದ ಸಂಹಿತೆಯ 64 ಅಧ್ಯಾಯಗಳಲ್ಲಿ ಕೇವಲ 1 ಅಧ್ಯಾಯ ಮಾತ್ರ ಮುಗಿದಿರುತ್ತದೆ. ವೇದಾರ್ಥ ವಿಚಾರದಲ್ಲಿ ವ್ಯಾಕರಣವು ಬಹುಮುಖ್ಯವಾದುದರಿಂದ ಪ್ರಾರಂಭದಲ್ಲಿ ಸ್ವಲ್ಪ ವಿಸ್ತಾರವಾಗಿ ಬರೆದಿದ್ದರೂ ಮುಂದಿನ ಭಾಗಗಳಲ್ಲಿ ಕ್ರಮೇಣ ಕಮ್ಮಿಯಾಗುವುದು. ಸಮಯೋಚಿತವಾಗಿ ಅಲ್ಲಲ್ಲಿ ಬರುವ ಉಪಾಖ್ಯಾನಗಳನ್ನೂ, ಪೂರ್ವೇತಿಹಾಸಗಳನ್ನು ಇತರ ವೇದಗಳ ಮತ್ತು ಪುರಾಣಾದಿಗ್ರಂಥಗಳ ಸಹಾಯದಿಂದ ವಿಶದವಾಗಿ ವಿವರಿಸಲಾಗಿದೆ.

ಈ ಕೃತಿಯು 19 ಅಧ್ಯಾಯಗಳಾದ, ಅಶ್ವಿನಾ ಯಜ್ವರೀ ಎಂಬ ಮೂರನೆಯ ಸೂಕ್ತ: ಪ್ರಥಮ ಮಂಡಲದಲ್ಲಿರುವ ಅನುವಾಕಸಂಖ್ಯೆ ಮತ್ತು ವಿವರಣೆ, ವೇದವಿಭಾಗ ಕ್ರಮದಲ್ಲಿ ಋಷಿಕ್ರಮ, ದೇವತಾಕ್ರಮ, ಛಂದಃಕ್ರಮವೆಂಬ ಮೂರು ವಿಭಾಗಗಳು, ಮಂಡಲಗಳ ವಿಭಾಗಕ್ರಮ, ಪ್ರಾತಸ್ವವನ, ಮಾಧ್ಯಂದಿನಸವನ, ತೃತೀಯಸವನಗಳ ವಿವರಣೆಯು, ಸೂಕ್ತದ ವಿನಯೋಗ, ಸೂಕ್ತದ ಋಷಿದೇವತಾಛಂದಸ್ಸುಗಳು, ಅಶ್ವನೀ ದೇವತೆಗಳ ಸೂಕ್ಷ್ಮ ಪರಿಚಯ, ಇಂದ್ರಶಬ್ಧ ನಿಷ್ಪತ್ತಿ ಮತ್ತು ಅರ್ಥವಿವರಣೆ, ವಿಶ್ವೇದೇವತೆಗಳ ಸೂಕ್ಷ್ಮಪರಿಚಯ, ಅಗ್ನಿಯು ನೀರಿನಲ್ಲಿ ಅಡಗಿಕೊಂಡಿದ್ದನೆಂಬ ಉಪಾಖ್ಯಾನ ವಿವರಣೆಯು. ಈ ವಿಷಯದಲ್ಲಿ ಋಗ್ವೇದ ಯಜುರ್ವೇದಗಳಲ್ಲಿರುವ ಪೂರ್ವೇತಿಹಾಸ ಕಥನವು, ಸರಸ್ವತೀದೇವಿಯ ಸೂಕ್ಷ್ಮಪರಿಚಯ, ಸರಸ್ವತೀ ಶಬ್ದದ ನಿಷ್ಪತ್ತಿ, ಅರ್ಥವಿವರಣೆ ಇತ್ಯಾದಿ. ನಾಲ್ಕನೇ ಅಧ್ಯಾಯದಲ್ಲಿ : ಸುರೂಪಕೃತ್ನುಂ ಎಂಬ ನಾಲ್ಕನೇಯ ಸೂಕ್ತವು : ಸೂಕ್ತದ ವಿನಿಯೋಗವು, ಸೂಕ್ತದ ಋಷಿದೇವತಾ ಛಂದಸ್ಸುಗಳು, ವೃತ್ತಾಸುರನ ವೃತ್ತಾಂತ. ಐದನೇ ಅಧ್ಯಾಯದಲ್ಲಿ ಅ ಶ್ವೇತಾ ನಿಷೀದತೆ ಎಂಬ ಐದನೆಯ ಸೂಕ್ತವು, ಸೂಕ್ತದ ವಿನಿಯೋಗವು, ಸೋಮಯಾಗದ ಸಪ್ತಪ್ರಭೇದಗಳು, ಅಭಿದ್ಲವಷಳಹ, ಪೃಷ್ಠಷಳಹ ಎಂಬ ಯಾಗಗಳ ವಿವರಣೆ ಹೀಗೆ ಒಂದೊಂದು ಅಧ್ಯಾಯವು ಹಲವಾರು ವಿಚಾರಗಳನ್ನು ವೇದಗಳ ಅರ್ಥವನ್ನು ತಿಳಿಸುತ್ತದೆ.

About the Author

ಎಚ್.ಪಿ. ವೆಂಕಟರಾವ್ ಶರಣ್ಮಾ

ಅನುವಾದಕ ಎಚ್.ಪಿ. ವೆಂಕಟರಾವ್ ಶರಣ್ಮಾ ಅವರು ಮೈಸೂರು ಅರಮನೆಯ ಆಸ್ಥಾನ ವಿದ್ಯಾಂಸರಾಗಿದ್ದರು. ವೇದ ಪಾರಂಗತರು. ಋಗ್ವೇದ ಸಂಹಿತಾ ಸಂಶೋಧನಾ ವಿಚಾರದಡಿ 30  ಕೃತಿಗಳನ್ನು ಪ್ರಕಟಿಸಿದ್ದಾರೆ. ಕೃತಿಗಳು : ಋಗ್ವೇದ ಸಂಹಿತೆ ಭಾಗ-1, ಋಗ್ವೇದ ಸಂಹಿತೆ ಭಾಗ-2, ಋಗ್ವೇದ ಸಂಹಿತೆ ಭಾಗ-3, ಋಗ್ವೇದ ಸಂಹಿತೆ ಭಾಗ-4, ಋಗ್ವೇದ ಸಂಹಿತೆ ಭಾಗ-5, ಋಗ್ವೇದ ಸಂಹಿತೆ ಭಾಗ-6, ಋಗ್ವೇದ ಸಂಹಿತೆ ಭಾಗ-7, ಋಗ್ವೇದ ಸಂಹಿತೆ ಭಾಗ-8, ಋಗ್ವೇದ ಸಂಹಿತೆ ಭಾಗ-9, ಋಗ್ವೇದ ಸಂಹಿತೆ ಭಾಗ-10, ಋಗ್ವೇದ ಸಂಹಿತೆ ಭಾಗ-11, ಋಗ್ವೇದ ಸಂಹಿತೆ ಭಾಗ-12, ಋಗ್ವೇದ ಸಂಹಿತೆ ಭಾಗ-13, ಋಗ್ವೇದ ಸಂಹಿತೆ ಭಾಗ-14, ಋಗ್ವೇದ ...

READ MORE

Related Books