‘ರಾಗ ವೈಭವ ’ ಕೃತಿಯು ವಾಸುದೇವ ಮೂರ್ತಿ ಅವರ ಸಂಕಲನವಾಗಿದ್ದು, ಲಲಿತಾಶಾಸ್ತ್ರಿ, ಸಾವಿತ್ರಿ ಭಾಸ್ಕರ್ ಅವರ ಕನ್ನಡ ಅನುವಾದಿತ ಕೃತಿಯಾಗಿದೆ. ಇಲ್ಲಿ ಲೇಖಕರು ತನ್ನನ್ನು ಕಾಣಬಂದ ಸಾಧಕನಿಗೆ, ಸ್ವತಃ ರಾಗಗಳೇ ತನ್ನ ಸ್ವಭಾವ, ಆಳ, ಗುಟ್ಟುಗಳನ್ನು ಬಿಟ್ಟುಕೊಟ್ಟು ನೀ ಸಾಧಿಸಬಲ್ಲೆಯಾ ಎಂದು ಕೇಳುತ್ತಿವೆ ಎನ್ನುತ್ತಾರೆ. ಸಂಗೀತದಲ್ಲಿ ರಾಗವೇ ಜೀವಾಳ, ಸಪಸ್ವರಗಳ ನಡುವಿನ ಸ್ವರಸಂಚಾರದ ಅಂತರಗಳು ಕೂದಲೆಳೆಯಷ್ಟು ಸೂಕ್ಷ್ಮ, ಗುಣ-ಸ್ವಭಾವಗಳಿಗನುಗುಣವಾಗಿ ದಿನದ ಇಂಥದೇ ಘಳಿಗೆಯಲ್ಲಿ ಮಾತ್ರ ಕೆಲವು ರಾಗಗಳನ್ನು ಹಾಡಬೇಕೆಂಬ ನಿಯಮವಿದೆ. ಒಂದೊಂದು ರಾಗವೂ ತನ್ನ ಮನೋಭಿತ್ತಿಯಲ್ಲಿ ಕಾಣಿಸಿಕೊಂಡು, ಮನಸ್ಸಿನ ನೆಲೆಗೆ ಮಾತ್ರ ದಕ್ಕುವಂಥ ರಾಗಗಳ ಶುದ್ಧಾತಿಶುದ್ಧ ಸಂಚಾರದ ಝಲಕ್ ಅನ್ನು ಮಿಂಚಿಸಿ ಮಾತಿಗೂ ಮೀರಿದ ಅನುಭವವನ್ನು ನೀಡಿದ್ದು ವಿಶೇಷ ಅನುಭವ – ವರ್ಣಿಸಲಸದಳ ಎನ್ನುತ್ತಾರೆ ಲೇಖಕರು. ಸಾಧಕನು ಛಲ-ದರ್ಪಗಳಿಂದ ಬೆನ್ನಟ್ಟಿ ರಾಗಗಳನ್ನು ವಶಪಡಿಸಿಕೊಳ್ಳಲು ಆಗುವುದಿಲ್ಲ. ವಿನೀತ ಭಾವದಿಂದ ಪ್ರಾರ್ಥಿಸಿ, ಅವು ತಾವಾಗಿ ಮೈದೋರಿ ಒಲಿದು ಬಂದಾಗ, ನಾವದನ್ನು ಗುರುತಿಸಿದಾಗ ಮಾತ್ರ ರಾಗದ ಸ್ಪಷ್ಟ ಚಿತ್ರಣ ಮೂಡುತ್ತದೆ.
(ಹೊಸತು, ಜನವರಿ 2011, ಪುಸ್ತಕದ ಪರಿಚಯ)
ರಾಗಗಳೊಂದಿಗೆ ಸಂವಾದ ! ಹೌದು, ಈ ಕೃತಿಯ ಮೂಲ ಲೇಖಕ, ಸಂಗೀತಗಾರ ವಾಸುದೇವ ಮೂರ್ತಿ ಇಲ್ಲಿ ರಾಗಗಳನ್ನು ಪರಿಚಯಿಸುವುದಲ್ಲ. ಬದಲಾಗಿ, ತನ್ನನ್ನು ಕಾಣಬಂದ ಈ ಸಾಧಕನಿಗೆ ಸ್ವತಃ ರಾಗಗಳೇ ತನ್ನ ಸ್ವಭಾವ, ಆಳ, ಗುಟ್ಟುಗಳನ್ನು ಬಿಟ್ಟುಕೊಟ್ಟು ನೀ ಸಾಧಿಸಬಲ್ಲೆಯಾ ಎಂದು ಕೇಳುತ್ತಿವೆ. ಸಂಗೀತದಲ್ಲಿ ರಾಗವೇ ಜೀವಾಳ, ಸಪಸ್ವರಗಳ ನಡುವಿನ ಸ್ವರಸಂಚಾರದ ಅಂತರಗಳು ಕೂದಲೆಳೆಯಷ್ಟು ಸೂಕ್ಷ್ಮ, ಗುಣ-ಸ್ವಭಾವಗಳಿಗನುಗುಣವಾಗಿ ದಿನದ ಇಂಥದೇ ಘಳಿಗೆಯಲ್ಲಿ ಮಾತ್ರ ಕೆಲವು ರಾಗಗಳನ್ನು ಹಾಡಬೇಕೆಂಬ ನಿಯಮವಿದೆ. ಒಂದೊಂದು ರಾಗವೂ ತನ್ನ ಮನೋಭಿತ್ತಿಯಲ್ಲಿ ಕಾಣಿಸಿಕೊಂಡು, ಮನಸ್ಸಿನ ನೆಲೆಗೆ ಮಾತ್ರ ದಕ್ಕುವಂಥ ರಾಗಗಳ ಶುದ್ಧಾತಿಶುದ್ಧ ಸಂಚಾರದ ಝಲಕ್ ಅನ್ನು ಮಿಂಚಿಸಿ ಮಾತಿಗೂ ಮೀರಿದ ಅನುಭವವನ್ನು ನೀಡಿದ್ದು ವಿಶೇಷ ಅನುಭವ – ವರ್ಣಿಸಲಸದಳ ಎನ್ನುತ್ತಾರೆ ಲೇಖಕರು. ಸಾಧಕನು ಛಲ-ದರ್ಪಗಳಿಂದ ಬೆನ್ನಟ್ಟಿ ರಾಗಗಳನ್ನು ವಶಪಡಿಸಿಕೊಳ್ಳಲು ಆಗುವುದಿಲ್ಲ. ವಿನೀತ ಭಾವದಿಂದ ಪ್ರಾರ್ಥಿಸಿ, ಅವು ತಾವಾಗಿ ಮೈದೋರಿ ಒಲಿದು ಬಂದಾಗ, ನಾವದನ್ನು ಗುರುತಿಸಿದಾಗ ಮಾತ್ರ ರಾಗದ ಸ್ಪಷ್ಟ ಚಿತ್ರಣ ಮೂಡುತ್ತದೆ. ಅಂತಹ ಕಲ್ಪನಾ ಚಿತ್ರಗಳೂ ತು೦ಬ ಸು೦ದರವಾಗಿ ಚಿತ್ರಿಸಲ್ಪಟ್ಟು ಇಲ್ಲಿ ಅಳವಡಿಸಲಾಗಿವೆ. ಸಪ್ತಸ್ವರಗಳು ರಾಗಗಳಾಗಿ ವಿಜೃಂಭಿಸುವುದನ್ನೂ, ತಾಳಗಳ ಪರಿಧಿಯೊಳಗೆ ಅವು ಕುಣಿದಾಡುವುದನ್ನೂ ಈ ಪುಸ್ತಕ ನಿರೂಪಿಸುತ್ತದೆ.
©2024 Book Brahma Private Limited.