ಸಮಕಾಲೀನ ತತ್ವಜ್ಞಾನಿಗಳಲ್ಲಿ ಅತ್ಯಂತ ಮುಖ್ಯ ಹೆಸರು ಜಿಜೆಕ್. ( ಸ್ಥವೋಜ್ ಐಸೆಕ್ ಎಂದೂ ಹೇಳುತ್ತಾರೆ) ಮೂಲತಃ ಆಧುನಿಕ ತತ್ವಜ್ಞಾನವನ್ನು ಬೇರೆ ಮಾದರಿಯಲ್ಲಿ ಅನ್ವಯ ಮಾಡಿದವನೂ ಹೌದು. ಮಾರ್ಚಿ 21, 1940ರಲ್ಲಿ ಲಿಬಿಯಾನದ ಸೊವೇನಿಯಾದಲ್ಲಿ ಹುಟ್ಟಿದನು. ದ ಸಬ್ಮ್ ಅಬೈಕ್ಸ್ ಆಫ್ ಈಡಿಯಾಲಜಿ ( 1989) ಲೆಸ್ ದೇನ್ ನಥಿಂಗ್ ( 1012) ವಯಲೆನ್ಸ್( 2007) ಲಿವಿಂಗ್ ಇನ್ ದಿ ಎಂಡ್ ಆಫ್ ಟೈಮ್ಸ್ ( 2010) ಫಸ್ಟ್ ಏಸ್ ಟ್ರಾಜಿಡಿ ದೆನ್ ಏಸ್ ಫಾರ್ (2009) ದ ಪಾರಲಕ್ಸ್ ವ್ಯೂ (2006) ಮುಖ್ಯ ಕೃತಿಗಳು. ಇವನನ್ನು ಅತ್ಯಂತ ಅಪಾಯಕಾರಿಯಾದ ಒಬ್ಬ ತತ್ವಜ್ಞಾನಿ ಎಂದು ಕೆಲವರು ಹೇಳಿದ್ದೂ ಇದೆ. ಲಕಾನ್, ಮಾರ್ಕ್ಸ್ ವಾದದಿಂದ ಪ್ರಭಾವಿತನಾಗಿದ್ದಾನೆ. ಅವನ ಅತ್ಯಂತ ಮಹತ್ವದ ಕೃತಿಗಳಲ್ಲಿ 'ದ ಪಾರಲಕ್ಸ್ ವ್ಯೂ' ಕೂಡಾ ಒಂದು. ಇದರಲ್ಲಿ ತತ್ವಜ್ಞಾನವಿದೆ. ಅದರ ಜೊತೆಗೆ ಅವನು ಉದಾಹರಣೆಗಳನ್ನು ಕೊಡುವಾಗ ಅನೇಕ ಚಲನಚಿತ್ರಗಳನ್ನು ಉಲ್ಲೇಖಿಸುತ್ತಾನೆ. ಮನೋವಿಶ್ಲೇಷಣೆಯು ಅವನ ಮುಖ್ಯವಾದ ಆಸಕ್ತಿಯೂ ಹೌದು. ಜೊತೆಗೆ ತತ್ವಜ್ಞಾನವನ್ನು ರಾಜಕಾರಣದ ಮೂಲಕವೂ ವಿವರಿಸುತ್ತಾನೆ. ಆತನ ಕೃತಿಯನ್ನು ಲೇಖಕ ಕೇಶವ ಶರ್ಮ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಈ ಕೃತಿಯಲ್ಲಿ ಒಂದು ವಸ್ತುವನ್ನು ನಾವು ಹೇಗೆ ಬೇರೆ ಬೇರೆ ಕೋನಗಳಿಂದ ನೋಡಿದರೆ ಅದರ ಅರ್ಥವು ಹೆಚ್ಚು ಖಚಿತವಾಗುತ್ತದೆ ಎನ್ನುವುದನ್ನು ಇಲ್ಲಿ ನಿರೂಪಿಸುತ್ತಾನೆ. ನಾವು ಎಲ್ಲಿ ನಿಂತು ಯಾವ ವಸ್ತುವನ್ನು ಹೇಗೆ ನೋಡುತ್ತೇವೆ ಎನ್ನುವುದರ ಆಧಾರದ ಮೇಲೆ ಅದರ ಅರ್ಥವು ಬೇರೆಯಾಗುತ್ತಾ ಹೋಗುತ್ತದೆ. ಅದನ್ನು ಅವನು ಪಾರ್ಶ್ವಿಕವಾದ ಒಂದು ದೃಷ್ಟಿಕೋನ ಎಂದು ಹೇಳುತ್ತಾನೆ. ಒಂದು ವಸ್ತುವನ್ನು ಒಂದು ಕೋನದಲ್ಲಿ ಮಾತ್ರವೇ ನೋಡಿದರೆ ನಮಗೆ ಅದು ಹೆಚ್ಚು ಖಚಿತವಾಗಿ ಕಾಣಿಸುವುದಿಲ್ಲ. ನಾವು ಸರಿಯಾದ ನಿರ್ಧಾರಕ್ಕೆ ಬರಲು ಇದು ಅತ್ಯಂತ ಅಗತ್ಯ ಕಾಂಟ್ ವಾದದ ಕಾರಣಗಳು ಮತ್ತು ಅದರ ವಿವರಣೆಗಳನ್ನು ಕೂಡಾ ಅವನು ಹೇಳುತ್ತಾನೆ.
©2024 Book Brahma Private Limited.