ಯು. ಆರ್. ಅನಂತಮೂರ್ತಿಯವರು ಇಂಗ್ಲಿಷ್‌ನಲ್ಲಿ ಬರೆದ ’ನನ್ನ ಸಾಹಿತ್ಯದ ಐದು ದಶಕಗಳು’ ಕೃತಿಯನ್ನು ಪತ್ರಕರ್ತ, ಅನುವಾದಕ ಬಿ. ಎಸ್. ಜಯಪ್ರಕಾಶ ನಾರಾಯಣ ಕನ್ನಡಕ್ಕೆ ತಂದಿದ್ದಾರೆ.
ಕೃತಿಯ ಬಗ್ಗೆ ಯು. ಆರ್. ಅನಂತಮೂರ್ತಿಯವರು ಹೀಗೆನ್ನುತ್ತಾರೆ: ಈ ಲೇಖನ ನನ್ನ ಸಾಹಸ. ಎಷ್ಟು ನೈಜವಾಗಿ ನನ್ನ ಬಗ್ಗೆ ನಾನೇ ಮಾತಾಡಬಹುದು ಎಂಬುದು ಕಠಿಣವಾದ - ಆತ್ಮಪರೀಕ್ಷೆ ಆದರೆ ಬರಹಗಾರನಾಗಿ ನಾನಲ್ಲದೆ ಬೇರೆ ಯಾರೂ ಹೇಳಲಾರದ ಸಂಗತಿಗಳಿದ್ದರೆ ಅದನ್ನು ಹೇಳುವುದು ಕೃತಿ ಪರೀಕ್ಷೆಯ ಮತ್ತು ಆಸ್ವಾದದ ದೃಷ್ಟಿಯಿಂದ ಓದುಗನಿಗೆ ಸಹಾಯಕವಾದದ್ದು. ಕನ್ನಡದಲ್ಲಿ ಬರೆಯಬೇಕಾದದ್ದನ್ನು ನಾನು ಇಂಗ್ಲಿಷಿನಲ್ಲಿ ಬರೆಯಬೇಕಾಯಿತು. ಗೆಳೆಯ ಜಯಪ್ರಕಾಶ ನಾರಾಯಣರು ಇದನ್ನು ಬಹಳ ಶ್ರಮ ವಹಿಸಿ ನನ್ನ ಮಾತಿಗೆ ಹತ್ತಿರವಾಗುವಂತೆ ಅನುವಾದಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
©2024 Book Brahma Private Limited.