’ನಾಗಾರ್ಜುನ ಕೃತಿ ಮತ್ತು ಚಿಂತನೆ’ ಬೌದ್ಧ ದಾರ್ಶನಿಕ ವಿಗ್ರಹ ವ್ಯಾವರ್ತಿನಿ ಮತ್ತುಸುಹೃಲ್ಲೇಖ ಕೃತಿಗಳ ಕನ್ನಡಾನುವಾದ ಮತ್ತು ವಿಚಾರಗಳ ಬಗ್ಗೆ ಇರುವ ಪೀಠಿಕೆಯನ್ನು ತಿಳಿಸುವಂತದ್ದು.
ಕನ್ನಡದ ಖ್ಯಾತ ಬರಹಗಾರರೂ, ವಿಮರ್ಶಕರೂ ಆದ ಡಿ. ಆರ್. ನಾಗರಾಜ್ ಅವರು ಹೊರತಂದಿರುವ ಈ ಪುಸ್ತಕದಲ್ಲಿ ನಾಗಾರ್ಜುನನ ವಿಶಿಷ್ಟ ಕೃತಿಯಾದ ವಿಗ್ರಹ ವ್ಯಾವರ್ತಿನಿಯ ಭಾಷಾಂತರವಿದೆ. ಜೊತೆಗೆ, ಸಂಸ್ಕೃತದಲ್ಲಿ ಲಭ್ಯವಿರದ ಆತನ ಕೃತಿ ಸುಹೃಲ್ಲೇಖದ ಆಯ್ದ ಭಾಗಗಳ ಭಾಷಾಂತರೂ ಇದೆ. ಈ ಅನುವಾದಗಳ ಜೊತೆಗೆ ನಾಗಾರ್ಜುನನ ಮುಖ್ಯ ತಾತ್ವಿಕ ಸಾಧನೆ ಮತ್ತು ಪರಿಕಲ್ಪನೆಗಳನ್ನು ಸರಳವಾಗಿ ಪರಿಚಯ ಮಾಡಿಕೊಡುವ ಒಂದು ಲೇಖನವೂ ಇದೆ. ಕನ್ನಡ ಚಿಂತನೆಗೆ ಇದೊಂದು ಮುಖ್ಯ ಕೊಡುಗೆ ಎನ್ನಬಹುದು.
©2024 Book Brahma Private Limited.