’ಮನುಷ್ಯ ತನ್ನ ಬದುಕನ್ನು ಸಾರ್ಥಕಪಡಿಸಿಕೊಳ್ಳಲು ಏನು ಮಾಡಬೇಕು ಎಂಬುದನ್ನು ತಿಳಿಸುವುದು ಮತ್ತು ಮನುಷ್ಯನ ಮುಖ್ಯ ಲಕ್ಷಣವೇ ಬುದ್ಧಿ’ ಎನ್ನುವುದು. ಗ್ರೀಕ್ ತತ್ವಜ್ಞಾನಿ ಎಪಿಕ್ಟೆಟಸ್‌ನ ’ದಿ ಆರ್ಟ್ ಆಫ್ ಲಿವಿಂಗ್’ ಪುಸ್ತಕವನ್ನು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ ಸುಭಾಷ್ ರಾಜಮಾನೆ.
ಮನುಷ್ಯನ ದೃಷ್ಟಿಕೋನ ಹೇಗೆ ರೂಪುಗೊಳ್ಳುತ್ತದೆ ಎಂಬುದರ ಬಗ್ಗೆ ತಿಳಿಯಲಾಗುತ್ತದೆ. ಇಲ್ಲಿಯ ಬೋಧನೆಗಳು ಬರಿ ಒಣ ನೀತಿಗಳಾಗಿಲ್ಲ. ಅವು ಜೀವನಾನುಭವ ಮತ್ತು ಆಳವಾದ ಚಿಂತನೆಗಳಿಂದ ಕೂಡಿದೆ. ಅಂದಿನ ಪುರಾತನ ಕಾಲದಲ್ಲಿಯೇ ಸಾಕ್ರಟೀಸ್, ಯುವ ಜನಾಂಗ ದಾರಿ ತಪ್ಪಬಾರದೆಂದು ಬೀದಿಯಲ್ಲಿ ನಿಂತುಕೊಂಡು ಉಪದೇಶಗಳನ್ನು ನೀಡುತ್ತಿದ್ದ. ಅಂತಹ ಕೆಲವು ಬೋಧನೆಗಳು ಇಲ್ಲಿ ಸಿಕ್ಕುತ್ತವೆ.
ಗ್ರೀಕ್ ತತ್ವಜ್ಞಾನಿ ಎಪಿಕ್ಟೇಟಸ್ ಅವರ 'ದಿ ಆರ್ಟ್ ಆಫ್ ಲಿವಿಂಗ್' ಕೃತಿಯನ್ನು ಸುಭಾಷ್ ರಾಜಮಾತೆ ಕನ್ನಡಕ್ಕೆ ಅನುವಾದಿಸಿದ್ದಾರೆ. - ಎಪಿಕೆಟಸ್ ತನ್ನ ಅಗಾಧವಾದ ಜೀವಾನುಭವದ ಹಿನ್ನೆಲೆಯಲ್ಲಿ ಮನುಷ್ಯ ಬದುಕುವ ಕಲೆಯ ಕುರಿತು ಚಿಂತಿಸಿದ್ದಾನೆ. ಆತ ತನ್ನ ಚಿಂತನೆಗಳ ಮೂಲಕವೇ ಅಪರೂಪದ ದಾರ್ಶನಿಕನಾಗಿ ತನ್ನ ಕಾಲವನ್ನು ಮೀರಿ ಇಂದಿಗೂ ಪ್ರಸ್ತುತನಾಗಿದ್ದಾನೆ. ಆತನ ಚಿಂತನೆಗಳು ಒಣ ಉಪದೇಶಗಳೆನಿಸುವುದಿಲ್ಲ; ಕಷ್ಟಕಾಲದಲ್ಲಿ ಆತ್ಮೀಯರೊಬ್ಬರು ಸಾಂತ್ವನ ಮಾತುಗಳನ್ನಾಡಿ ದಾರಿ ತೋರಿದಂತೆ ಇವೆ. - ಎರಡು ಭಾಗಗಳಲ್ಲಿ ಪುಟ್ಟ ಪುಟ್ಟ ಅಧ್ಯಾಯಗಳಿದ್ದು, ಒಂದೊಂದು ಅಧ್ಯಾಯವು ಒಂದೊಂದು ಗುಕ್ಕಿನಲ್ಲಿ ಓದಿ ಮನನ ಮಾಡುವಂತಿವೆ. ಇದರಲ್ಲಿ ಬದುಕಿನ ತಾತ್ವಿಕ ದರ್ಶನಗಳನ್ನು ನಿರ್ಲಿಪ್ತವಾಗಿ ಪರಿಚಯಿಸಲಾಗಿದೆ. ಪ್ರಕೃತಿಯೊಂದಿಗೆ ಸಾಮರಸ್ಯ ಬಯಸುವ, ಅಂತರಂಗದೊಂದಿಗೆ ಸಂಧಾನ ನಡೆಸುವ ಇಲ್ಲಿನ ಚಿಂತನೆಗಳು ಆಪ್ತಸಮಾಲೋಚಕವಾಗಿವೆ. ಮನುಷ್ಯನ ಹೃದಯದ ಆಳದಲ್ಲಿ ನೆಲೆಸಿರುವ ಸುಪ್ತಭಾವಗಳನ್ನು ಕೈದಡಿವಿ ಉದ್ದೀಪಿಸುವ ಶಕ್ತಿಯುತ ಬರಹಗಳಿವು. ಎಲ್ಲರಿಗೂ ಬದುಕುವ ಕಲೆ ರೂಢಿಸಿಕೊಳ್ಳಲು ಇದೊಂದು ಪುಟ್ಟ ಕೈಪಿಡಿ ಎನ್ನಬಹುದು.
ಕೃಪೆ: ಪ್ರಜಾವಾಣಿ, ಮೊದಲ ಓದು (2020 ಜನವರಿ 12)
©2024 Book Brahma Private Limited.