ಕಟ್ಟುನಿಟ್ಟಿನ ತಂದೆ ಆದರೆ ಸೂಕ್ಷ್ಮ ಮನೋಪ್ರವೃತ್ತಿಯ ಪ್ರೊಫೆಸರ್, ಅವರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸದೆ ಲೌಕಿಕ ನಂಬಿಕೆಗಳಲ್ಲೇ ಮುಳುಗಿರುವ ಅವರ ಪತ್ನಿ, ತನ್ನ ಹೆಂಡತಿಯನ್ನು ಹೊಸ ವ್ಯಕ್ತಿಯನ್ನಾಗಿ ಮಾಡುವ ಅವರ ಸ್ವಾರ್ಥಿ ಮಗ, ಐ.ಐ.ಟಿಯಲ್ಲಿ ಓದುತ್ತಿರುವಾಗ ಉಗ್ರರ ರಾಜಕೀಯದಲ್ಲಿ ದಾಳವಾಗಿರುವ ಅವರ ಎರಡನೆಯ ಮಗ, ಶಿಸ್ತು ಮತ್ತು ನೀತಿಯ ಕಟ್ಟಳೆಗಳ ಕಟ್ಟನ್ನು ಬಿಡಿಸಿಕೊಳ್ಳಬೇಕೆಂದು ಬಯಸಿ, ಪಾಶವೀ ವ್ಯಕ್ತಿಯೊಬ್ಬನನ್ನು ಪ್ರೀತಿಸಿ ಮದುವೆಯಾಗಿ ಜೀವನದಲ್ಲಿ ಸೋಲುವ ಅವರ ಎರಡನೆಯ ಮಗಳು. ಇಂತಹ ವಂಶವೃಕ್ಷವು ಸಹಜವಾಗಿ ಇರಬೇಕಾದ ಸುಂದರವಾದ ತನ್ನ ಹಸಿರು ಎಲೆಗಳನ್ನು ಕಳೆದುಕೊಂಡು ಪರಿಸ್ಥಿತಿಗಳ ಕಾರಣದಿಂದ ವಿಷವೇರಿದ ನೀಲಿ ಎಲೆಗಳನ್ನು ಹೊಂದುವಂತಾಗಿದೆ. ಹೀಗೆ ಹಲವು ಪ್ರಮುಖ ವಿಷಯಗಳನ್ನು ಮರದ ಎಲೆ ನೀಲಿ ಎಂಬ ಕೃತಿಯಲ್ಲಿ ರಮಾ ನರಸಿಂಹಾಚಾರ್ ವಿವರಗಳನ್ನು ನೀಡಿದ್ದಾರೆ.
©2024 Book Brahma Private Limited.