ಈ ಗ್ರಂಥದ ಮೂಲ ಕರ್ತೃ ಚಂದ್ರಕಾಂತ ಅಧಿಕಾರಿಯವರು ಡಾ|| ಬಾಬಾಸಾಹೇಬ ಅಂಬೇಡ್ಕರರ ನಿಕಟವರ್ತಿಗಳಾಗಿದ್ದವರು. ಸ್ವತಃ ವಕೀಲರು ಮತ್ತು ಕೊಂಕಣದಲ್ಲಿ ಖೋತಿ ವ್ಯವಸ್ಥೆಯ ವಿರುದ್ಧದ ಹೋರಾಟಗಳಲ್ಲಿ ಅಗ್ರಪಂಕ್ತಿಯಲ್ಲಿದ್ದವರು. ಆದ್ದರಿಂದ ಈ ಕೃತಿಯು ವಿಶೇಷ ಅಧಿಕೃತತೆಯನ್ನು ಪಡೆದುಕೊಂಡಿದೆ. ಅಂದಿನ ಅಪೂರ್ವ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಬೇರೆ ನಾಯಕರಾರೂ ತಮ್ಮ ನೇರ ಭಾಗವಹಿಸುವಿಕೆಯನ್ನು ಮತ್ತು ಅಂದಂದಿನ ಹೋರಾಟದ ವಿಕಾಸವನ್ನು ಇಷ್ಟು ಸಮಗ್ರವಾಗಿ ದಾಖಲಿಸಲಿಲ್ಲ.
ಡಾ|| ಅಂಬೇಡ್ಕರ್ ಅವರು ಬೌದ್ಧಮತವನ್ನು ಸ್ವೀಕರಿಸಿದ ತರುವಾಯದಲ್ಲಿ ಶ್ರೀ ಚಂದ್ರಕಾಂತ ಅಧಿಕಾರಿ ಸಹ ಬೌದ್ಧಮತಾವಲಂಬಿಯಾಗಿದ್ದವರು. ಅಂಬೇಡ್ಕರ್ ಅವರು ಸ್ಥಾಪಿಸಿದ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಲಿಯ ಸದಸ್ಯರಾಗಿ ಚಂದ್ರಕಾಂತ ಅಧಿಕಾರಿ ತಮ್ಮ ಜೀವನ ಪರ್ಯಂತ ಹಲವಾರು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಈ ಕೃತಿಯನ್ನು ಎನ್. ಗಾಯತ್ರಿಯವರು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.