ಲೇಖಕ ಎ. ಮೋಹನ್ ಕುಂಟಾರ್ ಅವರು ಬರೆದ ಭಾಷೆಗಳ ಅಧ್ಯಯನ ಕೃತಿ ʼಕನ್ನಡ- ಮಲಯಾಳಂ ಭಾಷಾಂತರ ಪ್ರಕ್ರಿಯೆʼ. ಇದು ಎರಡು ಭಾಷೆಗಳ ಪರಸ್ಪರ ಅನುವಾದ ಪ್ರಕ್ರಿಯೆಯ ಅಧ್ಯಯನವಾಗಿದೆ. ಪುಸ್ತಕಕ್ಕೆ ಬೆನ್ನುಡಿ ಬರೆದಿರುವ ಲೇಖಕ ಡಾ. ಹಿ. ಚಿ. ಬೋರಲಿಂಗಯ್ಯ ಅವರು ಪುಸ್ತಕದ ಬಗ್ಗೆ, ಕನ್ನಡ ಸಂಶೋಧನೆಯ ವಿಧಿ- ವಿಧಾನಗಳನ್ನು ಸೃಷ್ಟಿಸುವ ಪ್ರಯತ್ನ ಇಲ್ಲಿ ನಡೆದಿದೆ. ಇವುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅನೇಕ ಕಮ್ಮಟ, ತರಬೇತಿ ಮುಂತಾದಂತೆ ಹತ್ತಾರು ಶಿಬಿರಗಳು ಇಲ್ಲಿ ನಡೆಯುತ್ತವೆ. ಕನ್ನಡ ಹಾಗೂ ಮಲಯಾಳಂ ಎರಡು ಭಾಷೆಗಳಲ್ಲಿ ಭಾಷಾಂತರ ಕೃತಿಗಳು ರೂಪುಗೊಳ್ಳು ಕಾರಣ, ಪ್ರೇರಣೆಗಳನ್ನು ಕುರಿತು ಇಲ್ಲಿ ವಿಶೇಷವಾಗಿ ಅಧ್ಯಯನ ಮಾಡಲಾಗಿದೆ. ಭಾಷಾಂತರ ಕೃತಿಗಳ ಮಾಹಿತಿಯನ್ನು ನೀಡುವ ವಿಭಿನ್ನ ಮಾದರಿಗಳನ್ನು ಸಹ ಇದರಲ್ಲಿ ಕೊಡಲಾಗಿದೆ. 1970ರ ದಶಕದ ನಂತರ ಪಾಶ್ಚಾತ್ಯರಲ್ಲಿ ಭಾಷಾ ಅಧ್ಯಯನಕ್ಕೆ ವಿಭಿನ್ನ ರೂಪದ ದೃಷ್ಟಿಕೋನವನ್ನು ಒದಗಿಸಲು ಆರಂಭಿಸಲಾಯಿತು. ಆದರೆ ಕನ್ನಡದಲ್ಲಿ ಭಾಷಾ ಅಧ್ಯಯನವು ಇನ್ನಷ್ಟು ಖಚಿತವಾಗಿ ರೂಪುಗೊಳ್ಳಬೇಕಿದೆ. ಕನ್ನಡ, ಮಲಯಾಳಂ ಭಾಷೆಗಳ ಬಗೆಗೆ ತಿಳುವಳಿಕೆ ಹೊಂದಿರುವ ಡಾ. ಎ ಮೋಹನ್ ಕುಂಟಾರ್ ಅವರುಸಮರ್ಥವಾಗಿ ಪ್ರಸ್ತುತ ಕೃತಿಯನ್ನು ರೂಪಿಸಿ ಹೊಸದೊಂದು ಅಧ್ಯಯನ ಹೊಸದೊಂದು ಅಧ್ಯಯನ ಶಿಸ್ತಿಗೆ ಕೊಡುಗೆ ನೀಡಿದ್ದಾರೆ ಎಂದು ಸೂಚಿಸಿದ್ದಾರೆ.
©2024 Book Brahma Private Limited.